alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನಾನಕ್ಕೆಂದು ಹೋದ ಮಕ್ಕಳು ಹೊಂಡದಲ್ಲಿ ಬಿದ್ದು ಸಾವು

ಬಾಗಲಕೋಟೆ: ಸ್ನಾನಕ್ಕೆಂದು ತೆರಳಿದ್ದ ಇಬ್ಬರು ಬಾಲಕರು ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟ ಘಟನೆ ಬಾಗಲಕೋಟೆಯ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ.

ಸುಹಾಸ್ ನೀಲಣ್ಣವರ(15), ಮೇಘರಾಜ ಪತ್ತಾರ(14) ಮೃತಪಟ್ಟ ಬಾಲಕರು. ಸ್ನಾನಕ್ಕೆಂದು ಶನಿವಾರ ಬೆಳಿಗ್ಗೆ ತೆರಳಿದ ಮಕ್ಕಳು ಸಂಜೆಯಾದರೂ ವಾಪಸ್ ಮನೆಗೆ ಬಂದಿಲ್ಲ. ಅಕ್ಕಪಕ್ಕದಲ್ಲಿ ವಿಚಾರಿಸಿದರೂ ಮಕ್ಕಳ ಸುಳಿವಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.

ಗ್ರಾಮಕ್ಕೆ ಆಗಮಿಸಿದ ಪೊಲೀಸರು ಹುಡುಕಾಟ ನಡೆಸಿದಾಗ ಕೃಷಿ ಹೊಂಡದಲ್ಲಿ ಬಾಲಕರಿಬ್ಬರ ಶವ ಪತ್ತೆಯಾಗಿದೆ. ಕೃಷಿ ಹೊಂಡದಲ್ಲಿ ಬಿದ್ದ ಮಕ್ಕಳಿಗೆ ಈಜಲು ಬಾರದಿದ್ದ ಹಿನ್ನಲೆಯಲ್ಲಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬಾಗಲಕೋಟೆ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...