alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಯ ವಿಭಿನ್ನ ‘ಜೈಕಾರಕ್ಕೆ’ ಮನಸೋತ ದೇವೇಗೌಡರು….

ಮಂಡ್ಯ: ಮಾಜಿ ಪ್ರಧಾನಿ, ಜೆ.ಡಿ.ಎಸ್. ವರಿಷ್ಠ ಹೆಚ್.ಡಿ. ದೇವೇಗೌಡರಿಗೆ ಅವರ ಅಭಿಮಾನಿಯೊಬ್ಬರು ವಿಭಿನ್ನವಾಗಿ ಜೈಕಾರ ಹಾಕಿದ್ದಾರೆ. ಇದರಿಂದ ಗೌಡರೂ ಖುಷಿಯಾಗಿದ್ದು, ಅಲ್ಲಿದ್ದ ಜನ ಕೂಡ ನಗೆಗಡಲಲ್ಲಿ ತೇಲಿದ್ದಾರೆ.

ಮಂಡ್ಯ ಜಿಲ್ಲೆಯ ಹೊಡಗಟ್ಟಿಯಲ್ಲಿ ವರದರಾಜಸ್ವಾಮಿ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವೇಗೌಡರು ಭಾಗವಹಿಸಿದ್ದಾರೆ.

ಅವರು ಬಸರಾಳು ಗ್ರಾಮದ ಬಳಿ ಆಗಮಿಸಿದ ಸಂದರ್ಭದಲ್ಲಿ ಜನರೆಲ್ಲಾ ಅದ್ಧೂರಿ ಸ್ವಾಗತ ನೀಡಿ, ಘೋಷಣೆ ಕೂಗಿದ್ದಾರೆ. ಘೋಷಣೆಗಳ ನಡುವೆ ಅಭಿಮಾನಿಯೊಬ್ಬರ ವಿಭಿನ್ನ ಘೋಷಣೆ ಗಮನಸೆಳೆದಿದೆ.

‘ರಾಗಿ ಮುದ್ದೆ ಪ್ರಿಯ ದೇವೇಗೌಡರಿಗೆ ಜೈ’ ಎಂದು ಅಭಿಮಾನಿಯೊಬ್ಬರು ಘೋಷಣೆ ಕೂಗಿದ್ದು, ಅಲ್ಲಿದ್ದವರೆಲ್ಲಾ ನಗಾಡಿದ್ದಾರೆ. ಗೌಡರು ನಗುತ್ತಾ ತೆರಳಿದ್ದು, ಕಾರ್ಯಕ್ರಮದಲ್ಲಿ ತಮ್ಮನ್ನು ಮುದ್ದೆ ಪ್ರಿಯ ಗೌಡರು ಎಂದು ಕರೆದ ಅಭಿಮಾನಿ ಬಗ್ಗೆ ಪ್ರಸ್ತಾಪಿಸಿ, ಖುಷಿಯಾಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...