alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ATM ನಲ್ಲೇ ಬಂತು ನಕಲಿ ನೋಟು…!

ಬೆಂಗಳೂರು: ಎ.ಟಿ.ಎಂ.ನಲ್ಲೇ ನಕಲಿ ನೋಟು ಬಂದ ಆಘಾತಕಾರಿ ಘಟನೆ ಆರ್.ಟಿ. ನಗರದ ಸಿಂಡಿಕೇಟ್ ಬ್ಯಾಂಕ್ ನಲ್ಲಿ ನಡೆದಿದೆ.

ಸುನಂದಾ ಎಂಬುವವರು ಎ.ಟಿ.ಎಂ.ನಿಂದ ಹಣ ಡ್ರಾ ಮಾಡಿದ್ದು, ಅದರಲ್ಲಿ 2000 ರೂ. ಮುಖಬೆಲೆಯ ನಕಲಿ ನೋಟು ಪತ್ತೆಯಾಗಿದೆ. ಅವರು ಕೂಡಲೇ ಬ್ಯಾಂಕ್ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಬ್ಯಾಂಕ್ ಮ್ಯಾನೇಜರ್ ನಕಲಿ ನೋಟನ್ನು ಪಡೆದು ಅಸಲಿ ನೋಟು ನೀಡಿದ್ದಾರೆ.

ನಕಲಿ ನೋಟು ಪತ್ತೆಯಾದ ಹಿನ್ನಲೆಯಲ್ಲಿ ಎ.ಟಿ.ಎಂ. ಅನ್ನು ಬ್ಯಾಂಕ್ ಸಿಬ್ಬಂದಿ ಬಂದ್ ಮಾಡಿದ್ದಾರೆ. ಎ.ಟಿ.ಎಂ.ಗೆ ಹಣ ತುಂಬುವಾಗ ಪರಿಶೀಲನೆ ನಡೆಸಿ ತುಂಬಲಾಗುತ್ತದೆ. ಹೀಗಿದ್ದರೂ ಕೂಡ ಎ.ಟಿ.ಎಂ.ನಲ್ಲಿಯೇ ನಕಲಿ ನೋಟು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...