alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ಪತ್ರಕರ್ತನಿಗೆ ಸಾರ್ವಜನಿಕರಿಂದ ಫುಲ್ ಕ್ಲಾಸ್

ಬೆಂಗಳೂರು: ನಕಲಿ ಪತ್ರಕರ್ತನಿಗೆ ಸಾರ್ವಜನಿಕರು ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಮಂಜುನಾಥ್ ಸಿಕ್ಕಿಬಿದ್ದ ನಕಲಿ ಪತ್ರಕರ್ತ ಎಂದು ಗುರುತಿಸಲಾಗಿದೆ.

ಪ್ರಜಾನಿಧಿ, ವಜ್ರಾ ನ್ಯೂಸ್, tv 81 ಕನ್ನಡ ಇನ್ನಿತರ ಚಾನಲ್ ಗಳ ಲೋಗೋ ಇಟ್ಟುಕೊಂಡಿದ್ದು, ತನ್ನ ಆಲ್ಟೋ ಕಾರಿನ ಮೇಲೆ ಲೋಗೋ ಬಳಕೆ ಮಾಡಿದ್ದ. ಪತ್ರಕರ್ತನ ಹೆಸರಿನಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಈತ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ತನ್ನ ಕಾರಿಗೆ ಎರಡು ಹೆಸರಿನ ಪ್ಲೇಟ್ ಅಳವಡಿಸಿದ್ದ ಆರೋಪಿಯನ್ನು ಜನರೇ ಪತ್ತೆ ಹಚ್ಚಿದ್ದರು. ಹಿಂಬದಿ ಹಾಗೂ ಮುಂದೆ ಬೇರೇ ಬೇರೇ ನೇಮ್ ಪ್ಲೇಟ್ ಹಾಕಿದ್ದನ್ನು ಜನರೇ ಪ್ರಶ್ನಿಸಿದ್ದರು. ಉತ್ತರಿಸಲಾಗದೇ ಈತ ಪರದಾಡಿದ್ದು, ಕಾರು ಬಿಟ್ಟು ಎಸ್ಕೇಪ್ ಆಗಿದ್ದಾನೆ. ಬಳಿಕ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ಜನರು ಕಾರು ಒಪ್ಪಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...