alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯರಿಗೆ ವಂಚಿಸುತ್ತಿದ್ದ ನಕಲಿ ನಿರ್ಮಾಪಕ ಅರೆಸ್ಟ್

handcuffsಖ್ಯಾತ ನಿರ್ಮಾಪಕ ಕೆ. ಮಂಜು ಅವರ ಹೆಸರಿನಲ್ಲಿ ಯುವತಿಯರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರದ ಪುಣೆ ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಮೂಲದ ಮಂಜುನಾಥ್ ಮೂರ್ತಿ ಬಂಧಿತ ವ್ಯಕ್ತಿಯಾಗಿದ್ದು, ಈತ ತಾನು ಕನ್ನಡದ ಖ್ಯಾತ ನಿರ್ಮಾಪಕ ಕೆ. ಮಂಜು ಎಂದು ಯುವತಿಯರ ಮುಂದೆ ಪೋಸ್ ಕೊಡುತ್ತಿದ್ದನೆನ್ನಲಾಗಿದೆ. ತನ್ನ ಬಲೆಗೆ ಬಿದ್ದ ಯುವತಿಯರಿಗೆ ಆಡಿಷನ್ ನೆಪದಲ್ಲಿ ಪುಣೆಗೆ ಕರೆದುಕೊಂಡು ಹೋಗುತ್ತಿದ್ದ ಮಂಜುನಾಥ್ ಮೂರ್ತಿ ಅಲ್ಲಿ ಯುವತಿಯರಿಗೆ ವಂಚಿಸುತ್ತಿದ್ದನೆನ್ನಲಾಗಿದೆ.

ಈತನಿಂದ ವಂಚನೆಗೊಳಗಾದ ಪುಣೆ ಯುವತಿಯೊಬ್ಬಳು ಅಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ ವೇಳೆ ಮಂಜುನಾಥ್ ಮೂರ್ತಿಯ ಬಣ್ಣ ಬಯಲಾಗಿದ್ದು, ಪುಣೆ ಪೊಲೀಸರು ತಿಪಟೂರಿನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...