alex Certify
ಕನ್ನಡ ದುನಿಯಾ       Mobile App
       

Kannada Duniya

ಉಗಾಂಡ ಪ್ರಜೆಗಳಿಂದ ನಕಲಿ ಎಟಿಎಂ ಕಾರ್ಡ್ ತಯಾರಿಕೆ

ಬೆಂಗಳೂರು: ಉಗಾಂಡ ಪ್ರಜೆಗಳು ಬೆಂಗಳೂರಲ್ಲಿ ನಕಲಿ ಎಟಿಎಂ ಸೃಷ್ಟಿ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

ಕಳೆದ ವಾರ ಕೊತ್ತನೂರು ಬಳಿ ಸಂಜೆ ಎಟಿಎಂ ಕೇಂದ್ರದ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಉಗಾಂಡ ಪ್ರಜೆಗಳ ಮೇಲೆ ಕಣ್ಣಿಟ್ಟ ಪೊಲೀಸರು ವಿಚಾರಣೆಗೊಳಪಡಿಸಿದಾಗ ಈ ಪ್ರಕರಣ ಬಯಲಿಗೆ ಬಂದಿದೆ.

ಹೆಗಡೆ ನಗರ, ಎಂ.ಎಸ್. ಪಾಳ್ಯ, ಕೊತ್ತನೂರು ಮುಖ್ಯರಸ್ತೆ, ಗೆದ್ದಲಹಳ್ಳಿ ಸೇರಿದಂತೆ ಬೆಂಗಳೂರಿನ ವಿವಿಧ ಕಡೆ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮುಂತಾದ ಕಡೆಗಳಲ್ಲಿ ಎಟಿಎಂ ಕೇಂದ್ರಗಳಲ್ಲಿ ತಮ್ಮ ಬಳಿ ಇರುವ ಎಟಿಎಂ ರೀಡ್ ಮಾಡುವ ಸ್ವಿಮ್ಮರ್ ಮತ್ತು ಎಟಿಎಂ ಕಾರ್ಡ್ ರೀಡ್ ಮಾಡುವ ಚಿಪ್ ಹೊಂದಿರುವ ಮೈಕ್ರೋ ಕ್ಯಾಮೆರಾ ಪ್ಲೇಟ್ ಅನ್ನು ಅಳವಡಿಸಿ, ಅದರಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ತಮ್ಮ ಲ್ಯಾಪ್ ಟಾಪ್ ಗಳಿಗೆ ಅಳವಡಿಸಿಕೊಳ್ಳುತ್ತಿದ್ದರು.

ಬಳಿಕ ಲ್ಯಾಪ್ ಟಾಪ್ ಸಾಫ್ಟ್‌ವೇರ್ ಮೂಲಕ ಡೇಟಾವನ್ನು ನಕಲಿ ಎಟಿಎಂ ಕಾರ್ಡ್ ಗೆ ರವಾನಿಸಿ ನಂತರ ಎಟಿಎಂಗಳಿಗೆ ಹೋಗಿ ಗ್ರಾಹಕರ ಹಣವನ್ನು ಡ್ರಾ ಮಾಡಿಕೊಂಡು ವಂಚನೆ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಬಾಬಲಾಂಡ ಮತ್ತು ಒಂಗಿಡೋ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಆತ ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬನ ಬಂಧನವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...