alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ರಾಜೀನಾಮೆ ಕೇಳಿದ್ದ ಪೊಲೀಸ್ ಪೇದೆ ಈಗ ಮನೆಗೆ

ರಾಜ್ಯದ ರೈತರ ಸಾಲ ಮನ್ನಾ ವಿಚಾರದಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬಿಜೆಪಿ ಹಾಕಿದ್ದ, ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ? ಎಂಬ ಪೋಸ್ಟನ್ನು ಶೇರ್ ಮಾಡಿದ್ದ ಪೊಲೀಸ್ ಪೇದೆ ಈಗ ಸಸ್ಪೆಂಡ್ ಆಗಿದ್ದಾರೆ.

ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿರುವ ಅರುಣ್ ಡೊಳ್ಳಿನ್ ಸೇವೆಯಿಂದ ಅಮಾನತುಗೊಂಡ ಪೇದೆಯಾಗಿದ್ದು, ಪೊಲೀಸ್ ಆಯುಕ್ತ ನಾಗರಾಜ್ ಈ ಆದೇಶ ಹೊರಡಿಸಿದ್ದಾರೆ.

ಅರುಣ್ ಡೊಳ್ಳಿನ್ ಶೇರ್ ಮಾಡಿದ್ದ ಪೋಸ್ಟ್ ನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರ ರಚನೆಯಾಗಿ 18 ದಿನಗಳಾದರೂ ರಾಜ್ಯದ ರೈತರ ಸಾಲ ಮನ್ನಾ ಆಗಲಿಲ್ಲ. ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ ಎಂದು ಪ್ರಶ್ನಿಸಲಾಗಿತ್ತು.

ಸರ್ಕಾರಿ ನೌಕರರಾಗಿರುವ ಅರುಣ್ ಈ ಪೋಸ್ಟ್ ಶೇರ್ ಮಾಡಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಅರುಣ್ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...