alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿ ನಾಪತ್ತೆ ಸಂಬಂಧ ಠಾಣೆಯಲ್ಲಿ ದೂರು

ಶಿವಮೊಗ್ಗ : ಯುವತಿಯೊಬ್ಬಳು ಅನ್ಯಕೋಮಿಗೆ ಸೇರಿದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದು, ಲವ್ ಜಿಹಾದ್ ಆರೋಪ ಕೇಳಿಬಂದಿದೆ.

ಕಳೆದ ವರ್ಷವೇ ಮದುವೆಯಾಗಿದ್ದ ಯುವಕ-ಯುವತಿ ಮೈಸೂರಿನಲ್ಲಿ ನೆಲೆಸಿದ್ದು, ನಂತರದಲ್ಲಿ ಯುವತಿ ಪೋಷಕರ ಮನೆಗೆ ಆಗಮಿಸಿದ್ದಾಳೆ. ಮನೆಯಲ್ಲಿದ್ದ ಒಂದು ವಾರ ಕಾಲ ಏನನ್ನು ಹೇಳದೇ ಮೌನವಾಗಿದ್ದ ಯುವತಿ, ಬಳಿಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಆಕೆ ಪ್ರೀತಿಸಿ ಮದುವೆಯಾಗಿದ್ದ ಯುವಕ ಮೂರನೇ ಮದುವೆಯಾಗಿದ್ದಾನೆ ಎಂಬ ಆರೋಪ ಯುವತಿಯ ಪೋಷಕರಿಂದ ವ್ಯಕ್ತವಾಗಿದೆ. ಈ ಸಂಬಂಧ ಜಯನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶಿವಮೊಗ್ಗ ದುರ್ಗಿಗುಡಿ ನಿವಾಸಿಯಾಗಿರುವ ಯುವತಿಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯುವಕನ ಪರಿಚಯವಾಗಿದ್ದು 2016ರಲ್ಲಿ ಇವರಿಬ್ಬರ ಮದುವೆಯಾಗಿ ಮೈಸೂರಿನಲ್ಲಿ ನೆಲೆಸಿದ್ದಾರೆ.

ಪೋಷಕರು ಮೈಸೂರು ಪೊಲೀಸ್ ಆಯುಕ್ತರ ಮೊರೆಹೋಗಿದ್ದ ಸಂದರ್ಭದಲ್ಲಿ ಯುವತಿ ತಂದೆ-ತಾಯಿ ಬೇಡವೆಂದು ಹೇಳಿದ್ದು ಪತಿಯೊಂದಿಗೆ ವಾಸವಾಗಿದ್ದಾಳೆ. ಮೊದಲೇ ಮದುವೆಯಾಗಿದ್ದ ಯುವಕ ಯುವತಿಗೆ ಕಿರುಕುಳ ನೀಡಿದ್ದು, ಇದರಿಂದ ಮನನೊಂದ ಆಕೆ ಇತ್ತೀಚೆಗೆ ತವರಿಗೆ ವಾಪಾಸ್ ಆಗಿದ್ದಾಳೆ.

ಆದರೆ ಡಿ.17 ರಂದು ಯುವತಿ ನಾಪತ್ತೆಯಾಗಿದ್ದಾಳೆ. ಆಕೆಯನ್ನು ಯುವಕನೇ ಬಲವಂತದಿಂದ ಕರೆದುಕೊಂಡು ಹೋಗಿದ್ದಾನೆ ಎಂದು ಪೋಷಕರು ಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...