alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದವನಿಗೆ ತಕ್ಕ ಶಾಸ್ತಿ

fac-sike

ಮಂಗಳೂರು: ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ್ದ ಅಶ್ಲೀಲ ದೃಶ್ಯದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ ವ್ಯಕ್ತಿಗೆ 6 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ನೀಡಿದೆ.

ಸುಳ್ಯ ಅಲೆಟ್ಟಿ ಮೊರಂಗಲ್ಲು ನಿವಾಸಿಯಾಗಿರುವ 30 ವರ್ಷದ ವ್ಯಕ್ತಿಗೆ 1 ವರ್ಷ 6 ತಿಂಗಳು ಕಠಿಣ ಸಜೆ ಹಾಗೂ 12,000 ರೂ. ದಂಡ ವಿಧಿಸಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟೀ ಸ್ಟಾಲ್ ಹೊಂದಿರುವುದಾಗಿ ಯುವತಿಯನ್ನು ಆರೋಪಿ 2013 ರಲ್ಲಿ ಪರಿಚಯಿಸಿಕೊಂಡಿದ್ದ.

ಕೆಲಸಕ್ಕೆ ಹೋಗುತ್ತಿದ್ದ ಯುವತಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಒಮ್ಮೆ ಆಕೆಯ ಮನೆಯಲ್ಲಿ ತಂಗಿದ್ದ ಆರೋಪಿ ಅತ್ಯಾಚಾರ ಎಸಗಿ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ.

ಆತ ಟೀ ಸ್ಟಾಲ್ ಹೊಂದಿರದೇ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿರುವುದನ್ನು ತಿಳಿದ ಯುವತಿ ವಂಚಕನಿಗೆ ಬೈದಾಡಿ, ದೂರವಾಗಿದ್ದಾಳೆ.

ಆಕೆಗೆ 5 ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದ ಆರೋಪಿ ಇಲ್ಲದಿದ್ದರೆ, ಅಶ್ಲೀಲ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿದ್ದಾನೆ.

ಯುವತಿ ನಿರ್ಲಕ್ಷಿಸಿದಾಗ, ಫೇಸ್ ಬುಕ್ ಖಾತೆಯೊಂದನ್ನು ತೆರೆದು ಅದರಲ್ಲಿ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದ್ದಾನೆ. ಇದು ಯುವತಿಯ ಸಂಬಂಧಿಕರಿಗೆ ಗೊತ್ತಾಗಿ 2013 ರ ಜೂನ್ ನಲ್ಲಿ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಲಾಗಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...