alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ನಲ್ಲಿ ಲೈಕ್ ಮಾತ್ರವಲ್ಲ, ಸಿಟ್ಟೂ ಮಾಡ್ಬಹುದು

face buk 99

ಆಧುನಿಕತೆಯಿಂದಾಗಿ ಜಗತ್ತೇ ಒಂದು ಹಳ್ಳಿಯಂತಾಗಿದೆ. ತಾಂತ್ರಿಕತೆ ಹೆಚ್ಚಿದಂತೆಲ್ಲಾ ಸಂಪರ್ಕ, ಸಂವಹನ ಸಲೀಸಾಗಿದೆ. ಅದರಲ್ಲಿಯೂ ಇಂಟರ್ನೆಟ್, ಸಾಮಾಜಿಕ ಜಾಲತಾಣಗಳಿಂದ ಸಂಪರ್ಕ ಕ್ರಾಂತಿಯೇ ಉಂಟಾಗಿದೆ.

ಸಾಮಾಜಿಕ ಜಾಲತಾಣ ಫೇಸ್ ಬುಕ್ ಬಳಕೆದಾರರ ಸಂಖ್ಯೆಯೇ ಹಲವಾರು ಕೋಟಿಗಳ ಲೆಕ್ಕದಲ್ಲಿ ಇದೆ. ಫೇಸ್ ಬುಕ್ ನಲ್ಲಿ ಯಾರಾದರೂ ಸ್ಟೇಟಸ್ ಹಾಕಿದಾಗ ಲೈಕ್ ಮಾಡಬೇಕಿತ್ತು. ಇಲ್ಲವೇ ಕಾಮೆಂಟ್ಸ್ ಬರೆಯಬೇಕಿತ್ತು. ಬೇರೆಯದಕ್ಕೆ ಅವಕಾಶ ಇರಲಿಲ್ಲ. ಬಳಕೆದಾರರ ಅಭಿಪ್ರಾಯದಂತೆ ಫೇಸ್ ಬುಕ್ ಮಾದರಿಯನ್ನು ಬದಲಿಸಲಾಗಿದ್ದು, ನೀವು ಇನ್ನು ಮುಂದೆ ಲೈಕ್ ಜೊತೆಗೆ ಹಲವಾರು ಅಭಿಪ್ರಾಯಗಳನ್ನು ದಾಖಲಿಸುವ ಅವಕಾಶವನ್ನು ಫೇಸ್ ಬುಕ್ ಕಲ್ಪಿಸಿದೆ.

ಲೈಕ್ ನೊಂದಿಗೆ ಇಷ್ಟವಾಗಿದೆ, ಪ್ರೀತಿಯಾಗಿದೆ, ನಗು ಬಂದಿದೆ, ಸಿಟ್ಟಾಗಿದೆ, ದುಃಖವಾಗಿದೆ ಎಂದೆಲ್ಲಾ ನಿಮ್ಮ ಅಭಿಪ್ರಾಯವನ್ನು ದಾಖಲಿಸಬಹುದಾಗಿದೆ. ಬಳಕೆದಾರರ ಬೇಡಿಕೆಯಂತೆ ಪ್ರಾಯೋಗಿಕವಾಗಿ ಅನ್ ಲೈಕ್ ಕೊಡಲಾಗಿತ್ತು. ಇದೀಗ ಭಾವನೆಗಳನ್ನೂ ಕೂಡ ದಾಖಲಿಸುವ ಅವಕಾಶವನ್ನು ಫೇಸ್ ಬುಕ್ ಕಲ್ಪಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...