alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆ ವಂಚಿತ ಅಭ್ಯರ್ಥಿಗಳು ಆ.30 ರೊಳಗೆ ಅಗತ್ಯ ದಾಖಲೆ ಸಲ್ಲಿಸಲು ಸೂಚನೆ

ಬೆಂಗಳೂರು: ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ತಡವಾಗಿ ಬಂದ ಕಾರಣಕ್ಕೆ ಸಶಸ್ತ್ರ ಮೀಸಲು ಪೊಲೀಸ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ.

ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್ ಸ್ಟೇಬಲ್ ಹುದ್ದೆಯ ಲಿಖಿತ ಪರೀಕ್ಷೆಗೆ ಸಲ್ಲಿಸಬೇಕಾದ ಮಾಹಿತಿ:
1) ಅಭ್ಯರ್ಥಿ ಕ್ರಮ ಸಂಖ್ಯೆ
2) ಹೆಸರು
3) ಅರ್ಜಿ ಸಂಖ್ಯೆ
4)ಪರೀಕ್ಷಾ ಕೇಂದ್ರ ಮತ್ತು ವಿಳಾಸ
5) ಪ್ರಯಾಣದ ದಿನಾಂಕ
6) ರೈಲು ಕಾಯ್ದಿರಿಸಿದ ಮುಂಗಡ ಟಿಕೆಟ್ ಪ್ರತಿ ಮತ್ತು ಸಂಖ್ಯೆ
7) ಮೊಬೈಲ್ ಸಂಖ್ಯೆ

ಇದನ್ನು ಭರ್ತಿಗೊಳಿಸಿ ಮೂಲಪ್ರತಿಯನ್ನು ಆಗಸ್ಟ್ 30ರೊಳಗೆ ಎಡಿಜಿಪಿ (ನೇಮಕಾತಿ)ಯವರ ಬೆಂಗಳೂರು ಕಚೇರಿಗೆ ಸಲ್ಲಿಸಲು ಸೂಚನೆ ನೀಡಲಾಗಿದೆ.

ಆಗಸ್ಟ್ 5 ರಂದು ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ತಾಂತ್ರಿಕ ದೋಷದಿಂದ ಮಾರ್ಗ ಮಧ್ಯದಲ್ಲೇ 7 ಗಂಟೆಗಳ ಕಾಲ ನಿಂತ ಪರಿಣಾಮ ಬೆಂಗಳೂರಿಗೆ ತೆರಳಬೇಕಿದ್ದ ಸಾವಿರಾರು ಡಿ ಆರ್ ಪರೀಕ್ಷಾರ್ಥ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಾಗದೇ ವಂಚಿತರಾಗಿದ್ದರು. ರೈಲ್ವೆ ವಿಳಂಬಕ್ಕೆ ಬೇಸತ್ತ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು. ಇದರಿಂದ ಪರೀಕ್ಷೆ ವಂಚಿತ ಅಭ್ಯರ್ಥಿಗಳಿಗೆ ಇನ್ನೊಂದು ಅವಕಾಶ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...