alex Certify
ಕನ್ನಡ ದುನಿಯಾ       Mobile App
       

Kannada Duniya

ಹಸೆಮಣೆ ಏರಿದ ಕೆಲ ಗಂಟೆಯಲ್ಲೇ ಪರೀಕ್ಷೆಗೆ ಹಾಜರಾದ ‘ವಧು’

ಪ್ರತಿಯೊಬ್ಬರ ಜೀವನದಲ್ಲೂ ‘ಪರೀಕ್ಷೆ’ ಎಂಬುದಿರುತ್ತದೆ. ಅದು ಕೇವಲ ವಿದ್ಯಾಭ್ಯಾಸಕ್ಕೆ ಮಾತ್ರ ಸಂಬಂಧಿಸಿರುವುದಿಲ್ಲ. ಜೀವನದಲ್ಲೂ ಎದುರಾಗುತ್ತಿರುತ್ತದೆ.

ಇಂತಹ ಪರೀಕ್ಷೆಯನ್ನು ಏಕಕಾಲದಲ್ಲಿ ಎದುರಿಸಿದ ಯುವತಿಯೊಬ್ಬರು ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅರ್ಥಾತ್ ಬಿಕಾಂ ಅಂತಿಮ ವರ್ಷದ ಪರೀಕ್ಷೆ ಬರೆಯಬೇಕಾದ ವಧು, ಅದೇ ದಿನದಂದು ವಿವಾಹ ನಿಗದಿಯಾಗಿದ್ದ ಕಾರಣ ವಿವಾಹ ಮುಗಿಸಿಕೊಂಡ ಮರು ಗಳಿಗೆಯಲ್ಲೇ ಪರೀಕ್ಷೆಗೆ ಹಾಜರಾಗಿದ್ದಾರೆ.

ಇಂತಹ ಒಂದು ಅಪರೂಪದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದ್ದು, ಶ್ವೇತಾ ಎಂಬ ಯುವತಿ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲ ಗಂಟೆಯಲ್ಲೇ ತಮ್ಮ ಪತಿ ಹಾಗೂ ತಂದೆಯೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದು ಅಂತಿಮ ವರ್ಷದ ಬಿಕಾಂ ಪರೀಕ್ಷೆ ಬರೆದಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿಯಾಗುವಂತಹ ಕಾರ್ಯ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...