alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಲ್ಲಿ ಶಶಿಕಲಾಗೆ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಶಶಿಕಲಾರಿಗೆ ಕೋಟ್ಯಾಂತರ ರೂ. ಲಂಚ ಪಡೆದು ರಾಜಾತಿಥ್ಯ ನೀಡಲಾಗಿತ್ತೆಂಬ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.

ಕಾರಾಗೃಹಗಳ ಡಿಜಿಪಿಯಾಗಿ ಈಗ ನಿವೃತ್ತರಾಗಿರುವ ಸತ್ಯನಾರಾಯಣ ರಾವ್, ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿನಯ್ ಕುಮಾರ್ ನೇತೃತ್ವದ ಸಮಿತಿ ಮುಂದೆ ಹೇಳಿಕೆ ನೀಡಿದ್ದಾರೆನ್ನಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಶಶಿಕಲಾರಿಗೆ ಕೆಲವೊಂದು ಸೌಲಭ್ಯ ಕಲ್ಪಿಸಲಾಗಿತ್ತು ಹೊರತು ಯಾವುದೇ ಹಣ ಪಡೆದಿರಲಿಲ್ಲವೆಂದು ತಿಳಿಸಿದ್ದಾರೆನ್ನಲಾಗಿದೆ.

ಶಶಿಕಲಾರನ್ನು ಮೊದಲಿಗೆ ಸಾಮಾನ್ಯ ಕೈದಿಯಂತೆ ನಡೆಸಿಕೊಳ್ಳಲಾಗಿತ್ತು. ಇದಾದ ಒಂದು ತಿಂಗಳ ಬಳಿಕ ತಮ್ಮ ಆಪ್ತ ಸಹಾಯಕ ವೆಂಕಟೇಶ್ ಎಂಬವರ ಮೂಲಕ ಮುಖ್ಯಮಂತ್ರಿಗಳು ತಮ್ಮನ್ನು ಕರೆಸಿಕೊಂಡಿದ್ದು, ಶಶಿಕಲಾರಿಗೆ ಸೌಲಭ್ಯ ನೀಡಲು ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಶಶಿಕಲಾರಿಗೆ ಮಂಚ, ಹಾಸಿಗೆ ಹಾಗೂ ದಿಂಬು ನೀಡಲಾಗಿತ್ತೇ ಹೊರತು ಯಾವುದೇ ಐಷಾರಾಮಿ ಸೌಲಭ್ಯ ನೀಡಿರಲಿಲ್ಲವೆಂಬ ಹೇಳಿಕೆ ನೀಡಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...