alex Certify
ಕನ್ನಡ ದುನಿಯಾ       Mobile App
       

Kannada Duniya

ವಿಜಯವಾಡದಲ್ಲಿ ಪೂಜೆ ಸಲ್ಲಿಸಿದ ದೇವೇಗೌಡ ದಂಪತಿ

Gowda s

ವಿಜಯವಾಡ: ಮಾಜಿ ಪ್ರಧಾನಿ ಹಾಗೂ ಜೆ.ಡಿ.ಎಸ್. ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೇಗೌಡ ಅವರು, ಆಂಧ್ರಪ್ರದೇಶದ ವಿಜಯವಾಡಕ್ಕೆ ಭೇಟಿ ನೀಡಿದ್ದು, ಶ್ರೀರಾಮ, ಕನಕ ದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪತ್ನಿ ಚನ್ನಮ್ಮನವರೊಂದಿಗೆ ಹೆಲಿಕಾಫ್ಟರ್ ನಲ್ಲಿ ವಿಜಯವಾಡಕ್ಕೆ ಆಗಮಿಸಿದ ಅವರು, ಭದ್ರಾಚಲಂ ರಾಮಾಲಯ ಹಾಗೂ ಕನಕ ದುರ್ಗಮ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯಿಂದ ಗೌಡರನ್ನು ಬರಮಾಡಿಕೊಳ್ಳಲಾಯಿತು. ದೇವರ ದರ್ಶನ ಪಡೆದ ನಂತರ ಗೌಡರು ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನಿಂದಲೂ ಭದ್ರಾಚಲಂ ರಾಮಾಲಯಕ್ಕೆ ಬರಬೇಕೆಂದುಕೊಂಡಿದ್ದೆ. ಈಗ ಬಂದಿದ್ದೇನೆ ಎಂದು ಹೇಳಿದ್ದಾರೆ.

ಉತ್ತರದಿಂದ ದಕ್ಷಿಣದವರೆಗೆ ದೇಶದ ಬಹುತೇಕ ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಶ್ರೀರಾಮನ ದೇವಾಲಯಗಳಲ್ಲಿ ಒಂದಾದ ಭದ್ರಾಚಲಂ ದೇವಾಲಯಕ್ಕೆ ಇದೇ ಮೊದಲ ಬಾರಿಗೆ ಬಂದಿದ್ದೇನೆ ಎಂದು ಗೌಡರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...