alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ ಎಂದ ಮಾಜಿ ಶಾಸಕ

ಯಾದಗಿರಿ: ಸುರಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ ಎಂದು ಬೆದರಿಯೊಡ್ಡಿ ಕರ್ತವ್ಯನಿರತ ಪೊಲೀಸರಿಗೆ ಅವಾಜ್ ಹಾಕಿದ್ದಾರೆ.

ಮಾಜಿ ಶಾಸಕರ ಪುತ್ರ ರಾಜಾ ವೇಣುಗೋಪಾಲ ನಾಯಕ್ ಹಾಗು ಸಂಗಡಿಗರು ಕರ್ತವ್ಯದಲ್ಲಿ ನಿರತರಾಗಿದ್ದ ಶಂಭುರಾವ್, ಬಸವರಾಜ್ ಮತ್ತು ಶರಣಗೌಡ ಎಂಬವರಿಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ನಂತರ ಠಾಣೆಗೆ ಬಂದ ರಾಜಾ ವೆಂಕಟಪ್ಪ ನಾಯಕ್, ಡಿಎಸ್ಪಿ ಮತ್ತು ಸಿಪಿಐ ಎಲ್ಲಿ ಅವರನ್ನು ಕರೆಸಿ ಎಂದು ಅವಾಚ್ಯ ಪದಗಳನ್ನು ಬಳಸಿ ಬೈದಿದ್ದಾರೆ. ಹಾಗೇ ಇಡೀ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ ಎಂದು ಕೂಗಾಡಿದ್ದಾರೆನ್ನಲಾಗಿದೆ.

ಈ ಘಟನೆ ಕುರಿತಂತೆ ಪೊಲೀಸ್ ಸಿಬ್ಬಂದಿ, ಮೇಲಾಧಿಕಾರಿಗೆ ತಿಳಿಸಿದ್ದಾರೆ. ಮಾಜಿ ಶಾಸಕರು ಸೇರಿದಂತೆ ಉಳಿದ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...