alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ಮಾಜಿ ಶಾಸಕನ ನಿಜ ಬಣ್ಣ…?

ಗದಗ: ಚುನಾವಣೆ ಸಂದರ್ಭದಲ್ಲಿ ಮಾಜಿ ಶಾಸಕರೊಬ್ಬರ ಬಣ್ಣ ಬಯಲಾಗಿದೆ. ಯುವತಿಯೊಂದಿಗೆ ಮಾಜಿ ಶಾಸಕ ಅಶ್ಲೀಲವಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಯುವತಿಯೊಬ್ಬಳು ದೂರವಾಣಿ ಮೂಲಕ ಮಾಜಿ ಶಾಸಕನನ್ನು ಸಂಪರ್ಕಿಸಿದ್ದು, ತಾನು ಧಾರವಾಡದ ಕಾಲೇಜು ವಿದ್ಯಾರ್ಥಿನಿ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೇ, ಅಶ್ಲೀಲವಾಗಿ ಮಾತನಾಡಲು ಪ್ರಚೋದಿಸಿದ್ದಾಳೆ. ಮಾಜಿ ಶಾಸಕ ಕೂಡ ಎಗ್ಗಿಲ್ಲದೇ ಆಕೆಯೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದಾರೆ.

ತನ್ನ ಆಪ್ತ ಕಾರ್ಯದರ್ಶಿ ಪತ್ನಿ ಕುರಿತಾಗಿ ಮಾತನಾಡಿದ್ದಲ್ಲದೇ, ಹಲವಾರು ಮಹಿಳೆಯರೊಂದಿಗೆ ಮಲಗಿದ್ದಾಗಿ ಹೇಳಿಕೊಂಡಿದ್ದಾರೆ. ಅಂದ ಹಾಗೇ ಈ ಮಾಜಿ ಶಾಸಕ ಬಿ.ಜೆ.ಪಿ. ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆಡಿಯೋ ವೈರಲ್ ಆಗುತ್ತಲೇ ಸ್ಪಷ್ಟನೆ ನೀಡಿರುವ ಮಾಜಿ ಶಾಸಕ, ಇದು ತಮ್ಮ ಧ್ವನಿಯಲ್ಲ, ಯಾರೋ ಕಿಡಿಗೇಡಿಗಳ ಕೃತ್ಯ ಎಂದು ಹೇಳಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...