alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಯುವ ಜನತೆಯಲ್ಲಿ ಹೆಚ್ಚುತ್ತಿದೆ ಹೃದ್ರೋಗ ಸಮಸ್ಯೆ

ವಯಸ್ಸಾದವರಿಗೆ, ವಿಪರೀತ ಬೊಜ್ಜು ಇರುವವರಿಗೆ ಮಾತ್ರ ಹೃದಯಾಘಾತವಾಗುತ್ತದೆ ಎಂದು ಭಾವಿಸಬೇಡಿ. ಇತ್ತೀಚೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೃದ್ರೋಗ, ಹೃದಯಾಘಾತ ಸಂಬಂಧ ದಾಖಲಾಗುತ್ತಿರುವವರಲ್ಲಿ 16 ರಿಂದ 40 ವರ್ಷದೊಳಗಿನವರೇ ಹೆಚ್ಚಾಗಿದ್ದಾರೆ ಎಂದು ತಿಳಿದು ಬಂದಿದೆ.

ರೋಗಿಗಳ ನೋಂದಣಿ ಪರಿಶೀಲಿಸಿದ ವೇಳೆ ಇಂತಹ ಆತಂಕಕಾರಿ ಮಾಹಿತಿ ಕಂಡು ಬಂದಿದೆ. ಅದರಲ್ಲೂ ಸುಮಾರು 150 ರೋಗಿಗಳ ಪೈಕಿ 8 ಮಂದಿ 25 ವರ್ಷಕ್ಕೂ ಕೆಳಗಿನ ಮಹಿಳೆಯರಾಗಿದ್ದಾರೆ. ಪ್ರತಿ ದಿನ ಸರಾಸರಿ 3-4 ಪ್ರಕರಣಗಳು ಯುವ ರೋಗಿಗಳು ದಾಖಲಾಗುತ್ತಿದ್ದಾರೆ ಎಂದು ಗೊತ್ತಾಗಿದೆ.

2017 ಏಪ್ರಿಲ್‌ ವರೆಗೆ 1,864 ರೋಗಿಗಳು 10-40 ವರ್ಷದ ಒಳಗಿನವರು ಹೃದ್ರೋಗ, ಹೃದಯಾಘಾತಕ್ಕೆ ಸಂಬಂಧಿತ ಸಮಸ್ಯೆಗೆ ಒಳಗಾಗಿದ್ದಾರೆ. ಪ್ರಿಮೆಚೂರ್‌ ಕರೋನರಿ ಆರ್ಟಿರಿ ಡೀಸೀಸ್‌(ಪಿಸಿಎಡಿ) ಯೋಜನೆಯಡಿ ಆಸ್ಪತ್ರೆ ಈ ದಾಖಲೆಗಳನ್ನು ಪರಿಶೀಲಿಸಿದೆ.

ಗ್ಯಾಸ್ಟ್ರಿಕ್ ಸಮಸ್ಯೆ ಎಂದು ತಪ್ಪಾಗಿ ಭಾವಿಸಿದ್ದ ಆಂಧ್ರ ಮೂಲದ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗೆ ಹೃದಯಾಘಾತವಾಗಿದೆ. ಹೆಚ್ಚಿನವರು, ಹೃದಯಾಘಾತದ ಲಕ್ಷಣಗಳನ್ನು ಗಮನಿಸುವುದೇ ಇಲ್ಲ. ಗೊತ್ತಾಗುವುದೇ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

ಆಸ್ಪತ್ರೆಗೆ ದಾಖಲಾಗುವ ಶೇ.25ರಷ್ಟು ರೋಗಿಗಳು ಕ್ಯಾಬ್‌ ಡ್ರೈವರ್‌ಗಳಾಗಿದ್ದಾರೆ. ಅಂತೆಯೇ ಬೆಂಗಳೂರಿಗೆ ಬರುವ ಶೇ.45ರಷ್ಟು ಪ್ರಕರಣಗಳು ಜಿಲ್ಲಾಸ್ಪತ್ರೆಗಳ ಸಲಹೆಯಿಂದ ಲಭಿಸಿರುತ್ತದೆ. ಟ್ರಾಫಿಕ್‌, ವಾಯು ಮಾಲಿನ್ಯ, ಒತ್ತಡದ ಜೀವನ, ಬದಲಾದ ಜೀವನ ಕ್ರಮ ಸೇರಿ ಅನೇಕ ಕಾರಣಗಳಿಂದ ಇಂತಹ ಸಮಸ್ಯೆ ಉಂಟಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...