alex Certify
ಕನ್ನಡ ದುನಿಯಾ       Mobile App
       

Kannada Duniya

8 ನೇ ಬಾರಿ ಗೆಲುವು ದಾಖಲಿಸಿದ ಯಡಿಯೂರಪ್ಪ

ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಕಂಡಿದ್ದು, ಶಿಕಾರಿಪುರ ಕ್ಷೇತ್ರದ ಯಡಿಯೂರಪ್ಪ 8 ನೇ ಬಾರಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ 5ನೇ ಬಾರಿ, ತೀರ್ಥಹಳ್ಳಿ ಆರಗ ಜ್ಞಾನೇಂದ್ರ 4ನೇ ಬಾರಿ, ಸೊರಬದಲ್ಲಿ ಕುಮಾರ್ ಬಂಗಾರಪ್ಪ 4ನೇ ಬಾರಿ, ಕೆ.ಬಿ. ಅಶೋಕ್ ನಾಯ್ಕ ಮೊದಲ ಬಾರಿ ಚುನಾಯಿತರಾಗಿದ್ದಾರೆ.

ಸಾಗರ ಕ್ಷೇತ್ರದಲ್ಲಿ ಚುನಾಯಿತರಾಗಿರುವ ಹರತಾಳು ಹಾಲಪ್ಪ ಅವರಿಗೆ ಇದು ಮೂರನೇ ಗೆಲುವಾಗಿದೆ. ಹಿಂದೆ ಹೊಸನಗರ ಕ್ಷೇತ್ರದಲ್ಲಿ ಚುನಾಯಿತರಾಗಿದ್ದ ಅವರು ಕ್ಷೇತ್ರ ಪುನರ್ ವಿಂಗಡಣೆ ಕಾರಣದಿಂದ ಸೊರಬ ಕ್ಷೇತ್ರಕ್ಕೆ ವಲಸೆ ಹೋಗಿ ಅಲ್ಲಿ ಜಯಗಳಿಸಿದ್ದರು.

ಈ ಬಾರಿ ಕುಮಾರ್ ಬಂಗಾರಪ್ಪ ಬಿಜೆಪಿ ಬಂದಿದ್ದರಿಂದ ಹಾಲಪ್ಪ ಸೊರಬದಲ್ಲಿ ಸ್ಪರ್ಧಿ ದ್ದರು. ಹರತಾಳು ಹಾಲಪ್ಪ ಮೂರು ಬಾರಿಯೂ ಬೇರೆ ಬೇರೆ ಕ್ಷೇತ್ರಗಳಿಂದ ಬಿಜೆಪಿ ಶಾಸಕರಾಗಿರುವುದು ವಿಶೇಷವಾಗಿದೆ.

ಭದ್ರಾವತಿ ಕ್ಷೇತ್ರದಲ್ಲಿ ಚುನಾಯಿತರಾಗಿರುವ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಕೆ.ಸಂಗಮೇಶ್ವರ್ ಗೆ ಇದು ಮೂರನೇ ಗೆಲುವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...