alex Certify
ಕನ್ನಡ ದುನಿಯಾ       Mobile App
       

Kannada Duniya

ಸುಸಂಸ್ಕೃತರ ಸರ್ಕಾರಕ್ಕಾಗಿ ನಮ್ಮ ಹೋರಾಟವೆಂದ ಈಶ್ವರಪ್ಪ

k-s-eshwarappaಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ನಡುವಿನ ಭಿನ್ನಮತ ಶಮನ ಮಾಡಲು ಹೈಕಮಾಂಡ್ ಯತ್ನ ನಡೆಸಿದ್ದರೂ ಅದಿನ್ನೂ ತಹಬದಿಗೆ ಬಂದಿಲ್ಲ. ಪಕ್ಷದ ಯಾವುದೇ ನಾಯಕರು ಬಹಿರಂಗ ಹೇಳಿಕೆ ನೀಡದಂತೆ ವರಿಷ್ಟರು ಸೂಚನೆ ನೀಡಿದ್ದರೂ ಈಶ್ವರಪ್ಪ ಅದಕ್ಕೆ ಸೊಪ್ಪು ಹಾಕಿಲ್ಲ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬಳ್ಳೂಡಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಕೆ.ಎಸ್. ಈಶ್ವರಪ್ಪ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಸುಸಂಸ್ಕೃತರ ಸರ್ಕಾರ ಬರಲೆಂಬ ಉದ್ದೇಶದಿಂದ ತಾವುಗಳು ಪ್ರಯತ್ನ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಪಕ್ಷದ ಸಿದ್ದಾಂತ ತಿಳಿದಿರುವವರು ಪದಾಧಿಕಾರಿಗಳಾಗಬೇಕು ಎಂದು ಹೇಳಿರುವ ಈಶ್ವರಪ್ಪ, ಚುನಾವಣೆಯಲ್ಲೂ ಇಂತವರಿಗೆ ಟಿಕೇಟ್ ನೀಡಿ ಶಾಸಕರನ್ನಾಗಿ ಮಾಡಬೇಕಲ್ಲದೆ ಮಂತ್ರಿಗಳನ್ನಾಗಿಸಬೇಕಿದೆ ಎಂದಿದ್ದಾರೆ. ಕಳೆದ ಬಾರಿ ಅಧಿಕಾರದಲ್ಲಿದ್ದ ವೇಳೆ ತೆಗೆದುಕೊಂಡ ಕೆಲ ತೀರ್ಮಾನಗಳಿಂದಾಗಿ ಒಳ್ಳೆಯ ಕೆಲಸ ಮಾಡಿದರೂ ಮನ್ನಣೆ ಸಿಗದಂತಾಯಿತು. ಮುಂದಿನ ಬಾರಿ ಹೀಗಾಗಬಾರದೆಂಬ ಕಾರಣಕ್ಕೆ ಈಗಿನಿಂದಲೇ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ. ಆ ಮೂಲಕ ಯಡಿಯೂರಪ್ಪನವರ ಪಾಳಯಕ್ಕೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...