alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಲಂ ನಲ್ಲಿ ಇಂದು ಕೆ.ಎಸ್. ಈಶ್ವರಪ್ಪ ವಾಸ್ತವ್ಯ

ವಿಧಾನಪರಿಷತ್ ವಿರೋಧಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಇಂದು ಸ್ಲಂ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.  ರಾಜ್ಯದ ಕೊಳಗೇರಿಯಲ್ಲಿ ವಾಸಿಸುತ್ತಿರುವ ಜನರ ಸಂಕಷ್ಟ ಅರಿತು ಸಮಸ್ಯೆ ಪರಿಹರಿಸಲು ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ಕೊಳಚೆ ಮುಕ್ತ ಕರ್ನಾಟಕ ಬಿಜೆಪಿಯ ಮುಖ್ಯ ಗುರಿಯಾಗಿದ್ದು, ಇದರ ಭಾಗವಾಗಿ ಇಂದು ರಾಜ್ಯದ ವಿವಿಧೆಡೆ ಪಕ್ಷದ ನಾಯಕರು ಸ್ಲಂಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಅಂತೆಯೇ ಶಿವಮೊಗ್ಗದ ಎನ್.ಟಿ.ರಸ್ತೆಯ ನ್ಯೂಮಂಡ್ಲಿ ಸ್ಲಂನಲ್ಲಿರುವ ಶ್ರೀಮತಿ ದೀಪಾ ಗಣೇಶ್ ಅವರ ಮನೆಯಲ್ಲಿ ಕೆ.ಎಸ್.ಈಶ್ವರಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷ ಎಲ್.ಶಂಕರನಾಯ್ಕ ಮೊದಲಾದವರು ವಾಸ್ತವ್ಯ ಹೂಡುವರು.

ಫೆ.10 ರ ಇಂದು ಸಂಜೆ 7.30ಕ್ಕೆ ನ್ಯೂಮಂಡ್ಲಿ ಸ್ಲಂಗೆ ತೆರಳಿ ವಾಸ್ತವ್ಯ ಹೂಡುವರು. ಫೆ.11 ರಂದು ಬೆಳಿಗ್ಗೆ ತಿಳಕಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ನಡೆಸುವರು. ನಿವಾಸಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿ ಅಹವಾಲು ಸ್ವೀಕರಿಸಿ, ವರದಿ ಸಿದ್ದಪಡಿಸಿಕೊಂಡು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು.

ಹಿಂದೆ ಬಿಜೆಪಿಯಿಂದ ಎಲ್ಲ ಸ್ಲಂಗಳಲ್ಲಿ ನಡೆಸಿದ ಸರ್ವೇ ಕಾರ್ಯದ ಸಂದರ್ಭದಲ್ಲಿ ಕುಂದುಕೊರತೆ ಮತ್ತು ಅದರ ನಿವಾರಣೆ ಬಗ್ಗೆ, ಮುಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತೆಗೆದುಕೊಳ್ಳುವ ಕ್ರಮದ ಕುರಿತಾದ ವರದಿಯನ್ನು ಫೆ.11 ರಂದು ಬೆಳಿಗ್ಗೆ 8 ಗಂಟೆಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...