alex Certify
ಕನ್ನಡ ದುನಿಯಾ       Mobile App
       

Kannada Duniya

ಈಶ್ವರಪ್ಪನವರ ‘ಸಂಪತ್ತಿಗೆ ಸವಾಲ್’ ಅಂದ್ರು ಶಾಸಕ ಪ್ರಸನ್ನ ಕುಮಾರ್

kseshwarappa

ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪನವರ ಪುತ್ರ ಕೆ.ಇ. ಕಾಂತೇಶ್ ಸ್ಪರ್ಧಿಸಿರುವ ಹೊಳಲೂರು ಜಿಲ್ಲಾ ಪಂಚಾಯತ್ ಗೆ ನಡೆಯುತ್ತಿರುವ ಚುನಾವಣೆ ‘ಸಂಪತ್ತಿಗೆ ಸವಾಲ್’ ಚುನಾವಣೆಯಾಗಿದೆ ಎಂದು ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಬಿ. ಪ್ರಸನ್ನಕುಮಾರ್ ವಿಶ್ಲೇಷಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಕಾಂಗ್ರೆಸ್ ಮುಖಂಡರೆಲ್ಲಾ ಸೇರಿ ಹೊಳಲೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೈಲಾರಪ್ಪ ಪರವಾಗಿ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿಸಿದರು.

ಹೊಳಲೂರಿನಲ್ಲಿ ಈಶ್ವರಪ್ಪನವರ ಸಂಪತ್ತಿಗೆ ಮೈಲಾರಪ್ಪ ಸವಾಲ್ ಹಾಕಿದ್ದಾರೆ. ಮೈಲಾರಪ್ಪ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ್, ಮೈಲಾರಪ್ಪನವರ ಬಗ್ಗೆ ಹಳೆ ಹೋರಿ ಎಂದು ಟೀಕಿಸಿದ್ದಾರೆ. ಮೈಲಾರಪ್ಪ ಹಳೆ ಹೋರಿ ಅಲ್ಲ, ಅವರ ಅಭ್ಯರ್ಥಿ ಹೊಸ ಹೋರಿಯೂ ಅಲ್ಲ, ಅವರು ಜನಸೇವೆಗಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂಬುದನ್ನು ಆಯನೂರು ಮುಂಜುನಾಥ್ ಅರಿಯಬೇಕಿದೆ ಎಂದರು.

ಇಂತಹ ಕೀಳುಮಟ್ಟದ ಹೇಳಿಕೆ ನೀಡಿ ಆಯನೂರು ಅವರ ನೀಚಬುದ್ಧಿಯನ್ನು ತೋರಿಸಿದ್ದಾರೆ. ಅವರು ಹೊಳಲೂರಿಗೆ ದಿನಾ ಪ್ರಚಾರಕ್ಕೆ ಬಂದರೆ ಬಿಜೆಪಿ ತಾನಾಗೇ ಸೋಲುತ್ತದೆ ಎಂದು ವ್ಯಂಗ್ಯವಾಡಿದ ಪ್ರಸನ್ನ ಕುಮಾರ್, ತುಂಗಾನಾಲೆ ಆಧುನೀಕರಣ ಕಾಮಗಾರಿ ನಡೆದಿದ್ದರೆ, ಈ ಭಾಗದ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ, ಚುನಾವಣೆ ಕಾರಣಕ್ಕೆ ಅಪ್ಪ. ಮಗ ಪ್ರತಿಭಟನೆ ನಡೆಸಿದರು ಎಂದು ದೂರಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...