alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾದ ವರ ಮಂಟಪದಿಂದಲೇ ಪರಾರಿ !

Marriage parari

ಮದುವೆಯ ಸಂಭ್ರಮದ ಮನೆಯಲ್ಲಿ ಇದ್ದಕ್ಕಿದ್ದಂತೆ ಸೂತಕದ ಛಾಯೆ ಆವರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮದುವೆ ಮಂಟಪದಲ್ಲಿ ಮದುವೆ ನೆರವೇರಿ ಇನ್ನೇನು ಆರತಕ್ಷತೆ ನಡೆಯಬೇಕಿತ್ತು. ಅಷ್ಟರಲ್ಲಿಯೇ ವರ ಪರಾರಿಯಾಗಿದ್ದಾನೆ.

ಬೆಂಗಳೂರು ಶಿವಾಜಿನಗರದ ನಿವಾಸಿ ತಹಸೀನ್ ಹುಸೇನ್ ಪರಾರಿಯಾದ ವರ. ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಲ್ಯಾಣಮಂದಿರವೊಂದರಲ್ಲಿ ಈತನ ಮದುವೆ ನಡೆಯುತ್ತಿತ್ತು. ಮದುವೆಯ ಬಳಿಕ ಆರತಕ್ಷತೆ ಸಂದರ್ಭದಲ್ಲಿ ಆತನ ಮೊದಲ ಪತ್ನಿ ಕಾಣಿಸಿಕೊಂಡಿದ್ದಾಳೆ. ಮದುವೆ ಮನೆಯಲ್ಲಿ ಮೊದಲ ಪತ್ನಿಯನ್ನು ನೋಡಿದ ಹುಸೇನ್ ಕಾಲಿಗೆ ಬುದ್ಧಿ ಹೇಳಿದ್ದಾನೆ. ಹುಸೇನ್ ಗೆ ಈ ಮೊದಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡಾ ಇದ್ದಾರೆ.

ಮೊದಲ ಪತ್ನಿಯಿಂದ ದೂರವಾಗುವ ಪ್ರಯತ್ನ ನಡೆಸಿದ್ದ ಹುಸೇನ್ ಬೇರೊಬ್ಬ ಯುವತಿಯನ್ನು ಪ್ರೀತಿಸಿದ್ದಾನೆ. ಆಕೆಯನ್ನು ಮದುವೆಯಾಗಲು ಮುಂದಾಗಿದ್ದಾನೆ. ಫೆಬ್ರವರಿ 19ರಂದು ಈತನ ಮದುವೆ ನಡೆಯುತ್ತಿರುವುದು ಗೊತ್ತಾದ ಮೊದಲ ಪತ್ನಿ ಮದುವೆ ಮಂಟಪಕ್ಕೆ ಬಂದಿದ್ದು, ಆಕೆಯನ್ನು ಕಂಡ ವರ ಹುಸೇನ್ ಪರಾರಿಯಾಗಿದ್ದಾನೆ. ಅವನ ವಿರುದ್ಧ ಮೊದಲ ಹಾಗೂ ಎರಡನೇ ಪತ್ನಿ ಕೆಜಿ ಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...