alex Certify
ಕನ್ನಡ ದುನಿಯಾ       Mobile App
       

Kannada Duniya

ಪರಾರಿಯಾದ ನಕಲಿ ಎಂ.ಎಲ್.ಸಿ. ಸೋಮಣ್ಣಗೆ ಹುಡುಕಾಟ

ಚಿತ್ರದುರ್ಗ: ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವದ ಮುಕ್ತಿ ಬಾವುಟವನ್ನು ದುಬಾರಿ ಬೆಲೆಗೆ ಖರೀದಿಸಿದ್ದ ‘ನಕಲಿ ಎಂ.ಎಲ್.ಸಿ.’ ಸೋಮಣ್ಣ ವೃತ್ತಿಪರ ಕಳ್ಳನಂತೆ ಗೋಡೆ ಹಾರಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಉದ್ಯಮಿ ಎಲ್. ಸೋಮಣ್ಣ ಮುಕ್ತಿ ಬಾವುಟ ಖರೀದಿಸಿ ಪ್ರಚಾರ ಪಡೆದು ಚುನಾವಣೆಗೆ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದ. ತನ್ನನ್ನು ಎಂ.ಎಲ್.ಸಿ. ಸೋಮಣ್ಣ ಎಂದು ಪರಿಚಯಿಸಿಕೊಂಡು ಕೋಟ್ಯಂತರ ರೂ. ವಂಚಿಸಿದ ಆರೋಪ ಈತನ ಮೇಲಿದೆ. ಬ್ಯಾಂಕ್ ಅಧಿಕಾರಿ ಸೇರಿದಂತೆ ಹಲವರಿಂದ ಕೋಟ್ಯಂತರ ರೂ. ಹಣ ಪಡೆದು ಸೋಮಣ್ಣ ವಂಚಿಸಿದ್ದು, ಬೆಂಗಳೂರು ಬಸವೇಶ್ವರ ನಗರ ಸೇರಿ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ಬಸವೇಶ್ವರ ನಗರ ಠಾಣೆ ಪೊಲೀಸರು ಪ್ರಕರಣದ ವಿಚಾರಣೆಗಾಗಿ ಚಿತ್ರದುರ್ಗಕ್ಕೆ ಕರೆದುಕೊಂಡು ಬಂದಿದ್ದ ಸಂದರ್ಭದಲ್ಲಿ ಸೋಮಣ್ಣ ಪರಾರಿಯಾಗಿದ್ದಾನೆ. ಚಿತ್ರದುರ್ಗದ ಜ್ಯುವೆಲ್ಲರಿ ಶಾಪ್ ಗೆ ವಿಚಾರಣೆಗೆ ಕರೆತಂದಾಗ ಮೂತ್ರ ವಿಸರ್ಜನೆಗೆ ಹೋಗಿ ಬರುವುದಾಗಿ ಹೇಳಿ ಹಿಂಭಾಗದಲ್ಲಿದ್ದ ಶೌಚಾಲಯಕ್ಕೆ ತೆರಳಿದ್ದ ಸೋಮಣ್ಣ, ಗೋಡೆ ಹಾರಿ ವೃತ್ತಿಪರ ಕಳ್ಳನಂತೆ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬೆಂಗಳೂರು ಹಾಗೂ ಚಿತ್ರದುರ್ಗ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...