alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಪಾಸ್ ನಲ್ಲಿ ಬೆತ್ತಲೆ ಪರಾರಿಯಾದ ಕಾವಿಧಾರಿ

darwd-kavi

ಧಾರವಾಡ: ಧಾರವಾಡ ಹೊರವಲಯದ ಹೊಯ್ಸಳ ನಗರದ ಬೈಪಾಸ್ ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿ ಕಾವಿಧಾರಿಯೊಬ್ಬ ಅವಾಂತರ ಸೃಷ್ಠಿಸಿದ್ದಾನೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಿಂದ ಕಾರಿನಲ್ಲಿ ಬಂದಿದ್ದ ಕಾವಿಧಾರಿ ವ್ಯಕ್ತಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದಾನೆ. ಆತನಿಗೆ ಸ್ಥಳೀಯರು ತಡೆದು ಪ್ರಶ್ನಿಸಿದಾಗ, ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ.

ಸ್ವಾಮೀಜಿ ತೂರಾಡಿದ್ದನ್ನು ಗಮನಿಸಿದ ಸ್ಥಳೀಯರು ವಾಹನದಲ್ಲಿ ನೋಡಿದಾಗ ಮದ್ಯದ ಬಾಟಲಿ ಕಂಡು ಬಂದಿವೆ ಎನ್ನಲಾಗಿದೆ.

ಮದ್ಯದ ಅಮಲಿನಲ್ಲಿ ತೂರಾಡುತ್ತಿದ್ದ ಸ್ವಾಮೀಜಿಯ ಲುಂಗಿ ಕೆಳಗೆ ಬಿದ್ದಿದ್ದು, ಬೆತ್ತಲೆ ಸ್ಥಿತಿಯಲ್ಲಿದ್ದ ಆತನಿಗೆ ಲುಂಗಿ ಕಟ್ಟಲು ಮುಂದಾದರೂ ಆತ ಸ್ಥಳೀಯರೊಂದಿಗೆ ಜಗಳವಾಡಿ ಬೈಪಾಸ್ ರಸ್ತೆಯಲ್ಲಿ ಓಡಿ ಹೋಗಿದ್ದಾನೆ ಎಂದು ಹೇಳಲಾಗಿದೆ.

ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳೀಯರು ಘಟನೆಯ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...