alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಚ್ಚ ಸುದೀಪ್ ತಂಡದ ಪರ ಆಟವಾಡಿದ ಸೆಹ್ವಾಗ್ ರಿಂದ ಸಿಡಿಲಬ್ಬರದ ಬ್ಯಾಟಿಂಗ್

ಟೀಮ್ ಇಂಡಿಯಾದ ಮಾಜಿ ಓಪನರ್, ಡ್ಯಾಶಿಂಗ್ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಸಿಡಿಲಬ್ಬರದ ಬ್ಯಾಟಿಂಗ್ ಗೆ ಹೆಸರುವಾಸಿ. ವೀರು ಬ್ಯಾಟ್ ಹಿಡಿದು ನಿಂತರೆ ಸಿಕ್ಸ್, ಫೋರ್ ಗಳ ಸುರಿಮಳೆಯಾಗೋದ್ರಲ್ಲಿ ಡೌಟೇ ಇಲ್ಲ. ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ ಟ್ವಿಟ್ಟರ್ ನಲ್ಲೂ ಸೆಹ್ವಾಗ್ ಸ್ಟನ್ನಿಂಗ್ ಪರ್ಫಾಮೆನ್ಸ್ ನೀಡ್ತಾನೆ ಇರ್ತಾರೆ.

ಈಗ ಸೆಹ್ವಾಗ್ ರ ಈ ಎರಡು ವಿಚಾರಗಳಿಗೆ ಸಂಬಂಧಿಸಿದ ಟ್ವೀಟ್ ಒಂದು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಹಲವು ವರ್ಷಗಳ ನಂತರ ಸೆಹ್ವಾಗ್ ಮತ್ತೆ ಪ್ಯಾಡ್ ಕಟ್ಟಿ ಮೈದಾನಕ್ಕಿಳಿದು ಬ್ಯಾಟ್ ಮಾಡಿದ್ದು, ಕರ್ನಾಟಕ ಚಲನಚಿತ್ರ ಕಪ್ ಪಂದ್ಯಾವಳಿಯಲ್ಲಿ. ಸುದೀಪ್ ನಾಯಕತ್ವದ ಕದಂಬ ಲಯನ್ಸ್ ತಂಡದ ಪರ ಬ್ಯಾಟಿಂಗ್ ಮಾಡಿದ ವೀರೂ ತಮ್ಮ ಗತವೈಭವವನ್ನು ಮತ್ತೆ ಕ್ರೀಡಾಭಿಮಾನಿಗಳ ಮುಂದೆ ಪ್ರದರ್ಶನ ಮಾಡಿದ್ರು.

ಸಿಕ್ಸ್, ಫೋರ್ ಗಳ ಮೂಲಕ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ವೀರೂ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ರು. ತಮ್ಮ ಆಟದ ಖದರ್ ಅಂದಿಗೂ ಇಂದಿಗೂ ಬದಲಾಗಿಲ್ಲ ಅನ್ನೋದನ್ನ ಸೆಹ್ವಾಗ್ ಹಿಂದಿಯ ಪಂಚಿಂಗ್ ಡೈಲಾಗ್ ಗಳ ಮೂಲಕ ತಿಳಿಸಿದರು. ನನ್ನ ರೂಲ್ಸ್ ಅಂದೂ ಬದಲಾಗಿಲ್ಲ ಇಂದಿಗೂ ಬದಲಾಗಿಲ್ಲ, ಒಳ್ಳೆಯ ಕೆಲಸಗಳನ್ನು ಮಾಡೋದಕ್ಕೆ ತಡ ಏಕೆ. ಎಂಟರ್ ಟೇನ್ ಮೆಂಟ್, ಎಂಟರ್ ಟೇನ್ ಮೆಂಟ್ ಎಂಟರ್ಟೇನ್ ಮೆಂಟ್ ಅಂತ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಸೆಹ್ವಾಗ್ ಅವರ ಟ್ವೀಟ್ ಗೆ ನೆಟ್ಟಿಜನ್ಸ್ ಗಳಿಂದ ಕೂಡ ಮೆಚ್ಚುಗೆ ವ್ಯಕ್ತವಾಗ್ತಿದೆ. ಸೆಹ್ವಾಗ್ ಆಟದ ಹಾಗೆ ಅವರ ಟ್ವೀಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ ಗಳನ್ನ ಪಡೀತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...