alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶಿಷ್ಟ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ ಈ ಟೆಕ್ಕಿ

Engineer Benedict Jebakumar has picked 37 kg of nails from roadsಸಮಾಜ ಸೇವೆ ಮಾಡಲು ರಾಜಕೀಯ ಸೇರಲೇಬೇಕು ಎಂದೇನಿಲ್ಲ. ಒಬ್ಬ ಸಾಮಾನ್ಯ ಪ್ರಜೆ ಕೂಡ ಒಳ್ಳೆಯ ಕೆಲಸ ಮಾಡುವುದರ ಮೂಲಕ ಸಮಾಜಸೇವೆ ಮಾಡಬಹುದು. ಹಾಗಂತ ಪ್ರೂವ್ ಮಾಡಿದ್ದಾರೆ ಬೆನ್ಡಿಕ್ಟ್ ಜೇಬಾಕುಮಾರ್. ಇವರು ಕಳೆದ 15 ವರ್ಷದಿಂದ ರಸ್ತೆಯಲ್ಲಿ ಬಿದ್ದ ದೊಡ್ಡ ಮೊಳೆಗಳನ್ನು ಆರಿಸಿ ವಾಹನಗಳು ಪಂಕ್ಚರ್ ಆಗುವುದನ್ನು ತಪ್ಪಿಸಿದ್ದಾರೆ.

ಜೇಬಾಕುಮಾರ್ ಅವರು ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಪ್ರತಿದಿನ ಇವರು ಸಿಲ್ಕ್ ಬೋರ್ಡ್ ನಿಂದ ಬೆಲಂದೂರಿನಲ್ಲಿರುವ ಆಫೀಸಿಗೆ ಹೋಗುತ್ತಾರೆ. ಹೀಗೆ ಹೋಗುವವರು ಸುಮ್ಮನೆ ಹೋಗುವುದಿಲ್ಲ. ದಾರಿಯಲ್ಲಿ ಬಿದ್ದಿರುವ ಅಥವಾ ಯಾರೋ ಬೇಕಂತಲೇ ಇಟ್ಟಿರುವ ದೊಡ್ಡ ದೊಡ್ಡ ಮೊಳೆಗಳನ್ನು ಎತ್ತಿ ಮನೆಗೆ ತರುತ್ತಾರೆ. ಹೀಗೆ ದಾರಿಯಲ್ಲಿ ಸಿಕ್ಕ ಮೊಳೆಗಳು ಈಗಾಗಲೇ ಒಂದು ಕಂಟೇನರ್ ತುಂಬವಷ್ಟು ಆಗಿದೆ. ಈ ಕೆಲಸವನ್ನು ಅವರು ಇಂದು ನಿನ್ನೆಯಿಂದ ಮಾಡುತ್ತಿಲ್ಲ. ಜುಲೈ 23, 2001 ರಿಂದಲೇ ಮೊಳೆಗಳನ್ನು ಕಲೆಹಾಕಲು ಶುರುಮಾಡಿದ್ದಾರೆ.

ಪಂಕ್ಚರ್ ಕಟ್ಟುವವರು ತಮ್ಮ ದಂಧೆ ನಡೆಯಬೇಕೆಂದು ರಸ್ತೆಯಲ್ಲಿ ದೊಡ್ಡ ದೊಡ್ಡ ಮೊಳೆಗಳನ್ನು ಬಿಸಾಡುತ್ತಾರೆ. ಈ ಪ್ರಕರಣ ಪೊಲೀಸ್ ತನಕವೂ ಹೋಗಿತ್ತು. ರಸ್ತೆಯಲ್ಲಿ ಮೊಳೆಗಳನ್ನು ಬಿಸಾಡುವ ಪಂಕ್ಚರ್ ಅಂಗಡಿಯವರನ್ನು ಪೊಲೀಸರು ಬಂಧಿಸಿದ್ದರು. ನಂತರ ಕೆಲ ಸಮಯ ವಾಹನಗಳು ಪಂಕ್ಚರ್ ಆಗುವ ಪ್ರಮಾಣ ಕಡಿಮೆ ಆಗಿತ್ತಾದರೂ ಈಗ ಮತ್ತೆ ಮುಂದುವರೆದಿದೆ.

ಹೀಗೆ ಮೊಳೆ ಮಾನವರಾಗಿರುವ ಜೇಬಾಕುಮಾರ್ ಈವರೆಗೆ ಅದೆಷ್ಟು ವಾಹನಗಳು ಪಂಕ್ಚರ್ ಆಗುವುದನ್ನು ತಪ್ಪಿಸಿದ್ದಾರೋ ಏನೋ. “ಇಂತಹ ಮೊಳೆ ಪ್ರಕರಣಗಳು ಎಲ್ಲಿಯ ತನಕ ನಡೆಯುತ್ತದೆಯೋ ಅಲ್ಲಿಯವರೆಗೆ ನಾನೂ ರಸ್ತೆಯಲ್ಲಿನ ಮೊಳೆಗಳನ್ನು ಆರಿಸುತ್ತಲೇ ಇರುತ್ತೇನೆ” ಎಂದು ದೃಢವಾಗಿ ಹೇಳುತ್ತಾರೆ ಜೇಬಾಕುಮಾರ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...