alex Certify
ಕನ್ನಡ ದುನಿಯಾ       Mobile App
       

Kannada Duniya

ಕುಟುಂಬ ಸದಸ್ಯರನ್ನು ಇರಿದು ನೇಣಿಗೆ ಶರಣಾದ ಇಂಜಿನಿಯರ್

Crime-Pix 11a

ಕೊಯಮತ್ತೂರಿನಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 24 ವರ್ಷದ ಅಶ್ವಿನ್ ಎಂಬಾತ ತನ್ನ ತಂದೆ, ತಾಯಿ, ಅಜ್ಜಿ, ಸಹೋದರ ಸಂಬಂಧಿ ಹಾಗೂ ಚಿಕ್ಕಮ್ಮನನ್ನು ಇರಿದು ಬಳಿಕ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವ ಘಟನೆ ನಡೆದಿದೆ.

ಅಶ್ವಿನ್ ಅವರ ತಂದೆ ಶ್ರೀಹರಿ ಹೋಟೆಲ್ ಮ್ಯಾನೇಜರ್ ಆಗಿದ್ದು, ಖಿನ್ನತೆಯಿಂದ ಬಳಲುತ್ತಿದ್ದ ತಮ್ಮ ಪುತ್ರ ಅಶ್ವಿನ್ ಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಮೂರು ದಿನಗಳ ಹಿಂದೆ ಪತ್ನಿ ಲತಾ ಜೊತೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಪಂಚಾಯಿತಿಯ ನಿರ್ಕಜೆಗೆ ಬಂದಿದ್ದರೆನ್ನಲಾಗಿದೆ.

ಇಲ್ಲಿ ಅಶ್ವಿನ್ ಅವರ ಅಜ್ಜಿ ಸುಗುಣಮ್ಮ ವಾಸಿಸುತ್ತಿದ್ದು, ಭಾನುವಾರ ಮಧ್ಯಾಹ್ನದಂದು ಅಶ್ವಿನ್ ತನ್ನ ತಾಯಿ ಲತಾ, ಸಹೋದರ ಸಂಬಂಧಿ ಸುಮ, ಚಿಕ್ಕಮ್ಮ ವನಜಾಕ್ಷಿ ಹಾಗೂ ಅಜ್ಜಿ ಸುಗುಣಮ್ಮ ಅವರಿಗೆ ಕುಡುಗೋಲಿನಿಂದ ಇರಿದಿದ್ದಾನೆ. ಇದನ್ನು ತಡೆಯಲು ಬಂದ ತಂದೆ ಶ್ರೀಹರಿಯವರ ಮೇಲೂ ಹಲ್ಲೆ ಮಾಡಿದ್ದಾನೆ. ಬಳಿಕ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಲತಾ ಹಾಗೂ ಸುಗುಣಮ್ಮರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬದಿಯಡ್ಕ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...