alex Certify
ಕನ್ನಡ ದುನಿಯಾ       Mobile App
       

Kannada Duniya

ತುಟ್ಟಿಭತ್ಯೆ: ಸರ್ಕಾರಿ ನೌಕರರಿಗೆ ‘ಸಿಹಿ’ ಸುದ್ದಿ ನೀಡಿದ ಸಿ.ಎಂ.

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ನೇತೃತ್ವದ ನಿಯೋಗ ಮನವಿ ಸಲ್ಲಿಸಿದ್ದು, ಇದಕ್ಕೆ ಸಿ.ಎಂ. ಸ್ಪಂದಿಸಿದ್ದಾರೆ.

ಸರ್ಕಾರಿ ನೌಕರರಿಗೆ ಜನವರಿಯಿಂದ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆಯನ್ನು ನೀಡುವ ಭರವಸೆಯನ್ನು ಸಿ.ಎಂ. ನೀಡಿದ್ದಾರೆ. ಪ್ರತಿ ವರ್ಷದಂತೆ ಸರ್ಕಾರಿ ನೌಕರರಿಗೆ ಈ ವರ್ಷವೂ ತುಟ್ಟಿಭತ್ಯೆ ನೀಡಲಾಗುವುದು. ಕೇಂದ್ರ ಸರ್ಕಾರ ಘೋಷಿಸುವ ತುಟ್ಟಿಭತ್ಯೆಯ ಪ್ರಮಾಣದಲ್ಲಿ ಶೇ. 0.944 ರಷ್ಟು ತುಟ್ಟಿಭತ್ಯೆ ನೀಡುವ ಭರವಸೆಯನ್ನು ಅವರು ನೀಡಿದ್ದಾರೆ ಎನ್ನಲಾಗಿದೆ.

ವೇತನ ಪರಿಷ್ಕರಣೆಯಾದ ನಂತರ ಶೇ. 42.25 ರಷ್ಟು ತುಟ್ಟಿಭತ್ಯೆ ಮೂಲ ವೇತನದಲ್ಲಿ ವಿಲೀನವಾಗಲಿದೆ. ಮಾರ್ಚ್ ಅಂತ್ಯದ ವೇಳೆಗೆ ಇಲ್ಲವೇ ಏಪ್ರಿಲ್ ಮೊದಲವಾರದಲ್ಲಿ ಜನವರಿಯಿಂದ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆಯನ್ನು ನೀಡಬೇಕೆಂದು ಸರ್ಕಾರಿ ನೌಕರರ ಸಂಘದ ನಿಯೋಗ ಮನವಿ ಮಾಡಿದೆ.

ಮನೆ ಬಾಡಿಗೆ ಭತ್ಯೆಯನ್ನು ಈಗಿನಂತೆಯೇ ಶೇ. 30 ರಷ್ಟು, ಶೇ. 20 ರಷ್ಟು ಹಾಗೂ ಶೇ. 10 ರಷ್ಟು ಕೊಡಬೇಕು. ಶೇ. 45 ರಷ್ಟು ಫಿಟ್ ಮೆಂಟ್ ನೀಡಬೇಕೆಂದು ನೌಕರರು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...