alex Certify
ಕನ್ನಡ ದುನಿಯಾ       Mobile App
       

Kannada Duniya

ಏರಿಕೆಯಾಗಲಿದೆ ಸರ್ಕಾರಿ ನೌಕರರ ಆರಂಭಿಕ ಕನಿಷ್ಠ ಮೂಲವೇತನ

ಬೆಂಗಳೂರು: ನಿವೃತ್ತ ಐ.ಎ.ಎಸ್. ಅಧಿಕಾರಿ ಎಂ.ಆರ್. ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯ ವೇತನ ಆಯೋಗ, ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಲು ಸಿದ್ಧತೆ ನಡೆಸಿದೆ.

ರಾಜ್ಯ ಸರ್ಕಾರಿ ನೌಕರರ ಆರಂಭಿಕ ಕನಿಷ್ಠ ಮೂಲ ವೇತನ 17,950 ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಶೇ. 35 ರಷ್ಟು ಫಿಟ್ ಮೆಂಟ್ ಗೆ ಶಿಫಾರಸು ಮಾಡಲಾಗಿದೆ. ವೇತನ ಪರಿಷ್ಕರಿಸಿದ ಸಂದರ್ಭದಲ್ಲಿ ಏರಿಕೆ ಮಾಡಲಾದ ಮೂಲವೇತನಕ್ಕೆ ಶೇಕಡವಾರು ಪ್ರಮಾಣದಲ್ಲಿ ಫಿಟ್ ಮೆಂಟ್ ನಿಗದಿ ಮಾಡಲಾಗುವುದು. ಇದರಿಂದ ನೌಕರರಿಗೆ ವೇತನ ಶ್ರೇಣಿಗೆ ತಕ್ಕಂತೆ ವೇತನ ಹೆಚ್ಚಳವಾಗುತ್ತದೆ.

ವೇತನ ಆಯೋಗ ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ಮೂಲ ವೇತನಕ್ಕೆ ಶೇ. 30 ರಿಂದ 35 ರಷ್ಟು ಫಿಟ್ ಮೆಂಟ್ ನೀಡುವಂತೆ ಶಿಫಾರಸು ಮಾಡುವ ಸಾಧ್ಯತೆ ಇದ್ದು, ಫಿಟ್ ಮೆಂಟ್ ಹೆಚ್ಚಳವಾದಲ್ಲಿ ಮೂಲವೇತನ 9,600 ರೂ.ನಿಂದ 17,420 ರೂ. -17,950 ರೂ. ವರೆಗೆ ಏರಿಕೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...