alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದ ಆನೆ

elephant-ss

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ, ಮಂಚನ ಬೆಲೆ ಹೊರವಲಯದಲ್ಲಿ ಬಿದ್ದು ಗಾಯಗೊಂಡಿದ್ದ, ಸಿದ್ಧ ಹೆಸರಿನ ಆನೆಯ ಸ್ಥಿತಿ ಗಂಭೀರವಾಗಿದೆ.

ಆಗಸ್ಟ್ 30 ರಂದು ಆಯತಪ್ಪಿ ಬಿದ್ದಿದ್ದ ಸಿದ್ಧ ಆನೆಯ ಕಾಲಿಗೆ ಪೆಟ್ಟಾಗಿತ್ತು. ಅಂದಿನಿಂದಲೂ ನೋವು ಅನುಭವಿಸುತ್ತಿದ್ದ ಆನೆಯ ಆರೋಗ್ಯ ಕ್ಷೀಣಿಸಿದ್ದು, ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ, ಸಿದ್ಧನನ್ನು ಆರೈಕೆ ಮಾಡಿದ್ದರು. ಅದಕ್ಕೆ ಪಶು ವೈದ್ಯರು ಚಿಕಿತ್ಸೆ ನೀಡಿದ್ದರಾದರೂ ಚೇತರಿಕೆ ಕಂಡು ಬಂದಿರಲಿಲ್ಲ. ಆನೆಗೆ ಅಲ್ಲೇ ಆಹಾರ ನೀಡಲಾಗಿತ್ತು.

ಬಲಶಾಲಿಯಾಗಿದ್ದ ಆನೆ ತಡೆಯಲಸಾಧ್ಯ ನೋವಿನಿಂದ ನರಳುತ್ತಿದ್ದು, ಸೊರಗಿದೆ. ಮಂಚನಬೆಲೆ ಸಮೀಪದಲ್ಲೇ ಬೀಡು ಬಿಟ್ಟಿದ್ದ ಆನೆಗೆ, ತಜ್ಞ ವೈದ್ಯರು ಚಿಕಿತ್ಸೆ ನೀಡಿದ್ದರೂ, ಅದು ಚೇತರಿಸಿಕೊಳ್ಳದೇ ಗೋಪಾಲನಗರ ಸಮೀಪದ ರಾಗಿ ಹೊಲದಲ್ಲಿ ಕುಸಿದು ಬಿದ್ದಿದೆ. ಬೆಳಿಗ್ಗೆಯಿಂದಲೂ ಅದಕ್ಕೆ ಉಪಚರಿಸಿದ್ದರೂ, ಚೇತರಿಕೆ ಕಂಡು ಬಂದಿಲ್ಲ. ಮಲಗಿದಲ್ಲೇ ಆನೆ ಸಂಕಟ ಅನುಭವಿಸುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...