alex Certify
ಕನ್ನಡ ದುನಿಯಾ       Mobile App
       

Kannada Duniya

ಕಡೆಗೂ ಬದುಕಲಿಲ್ಲ ಕಾಡಾನೆ ಸಿದ್ಧ

kadane

ರಾಮನಗರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ಮಂಚನಬೆಲೆ ಜಲಾಶಯದ ಬಳಿ, ಕಾಲು ಮುರಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದ ಕಾಡಾನೆ ಸಿದ್ಧ ಮೃತಪಟ್ಟಿದ್ದಾನೆ.

ಕಳೆದ ಆಗಸ್ಟ್ 30 ರಂದು ಕಾಡಿನಿಂದ ಬಂದಿದ್ದ ಆನೆ ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡಿದ್ದು, ಸಮೀಪದ ರಾಗಿ ಹೊಲದಲ್ಲಿಯೇ ಬಿದ್ದು ನರಳಾಡುತ್ತಿತ್ತು. ಅದಕ್ಕೆ ಗ್ರಾಮಸ್ಥರು ಅಲ್ಲೇ ಉಪಚರಿಸಿ, ಆಹಾರ ನೀಡಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಆಹಾರ ಒದಗಿಸಿದ್ದರು. ಬನ್ನೇರುಘಟ್ಟ ವನ್ಯಜೀವಿ ವಿಭಾಗದ ತಜ್ಞ ವೈದ್ಯರು ಚಿಕಿತ್ಸೆ ನೀಡಿದ್ದರು. ಅಲ್ಲದೇ ಹೊರ ರಾಜ್ಯದ ತಜ್ಞರಿಂದಲೂ ಚಿಕಿತ್ಸೆ ಕೊಡಿಸಲಾಗಿತ್ತು.

ಆದರೂ ಸಿದ್ಧ ಚೇತರಿಸಿಕೊಂಡಿರಲಿಲ್ಲ. ಸೇನೆಯಿಂದ ಸೇಫ್ಟಿ ಟವರ್ ನಿರ್ಮಿಸಿ ಸಿದ್ಧನನ್ನು ಆರೈಕೆ ಮಾಡಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಸಿದ್ಧನ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಕಾಲು ಮುರಿದುಕೊಂಡಿದ್ದ ಕಾಡಾನೆ ಇನ್ನಿಲ್ಲವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...