alex Certify
ಕನ್ನಡ ದುನಿಯಾ       Mobile App
       

Kannada Duniya

ಪಟಾಕಿ ಸದ್ದಿಗೆ ಹೈರಾಣಾದ ಆನೆಗಳು

Family of Indian elephants, Elaphas maximus, with two calfs crossing a path, Kaziranga National Park, Assam, India. Kaziranga - Karbi Anglong Landscape

ಕೋಲಾರ: ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಭಾಗದಲ್ಲಿ ಕಳೆದ 1 ವಾರದಿಂದ, ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಅವುಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ನಡೆಸುತ್ತಿದ್ದಾರೆ.

ಬಂಗಾರ ಪೇಟೆ ತಾಲ್ಲೂಕಿನ ಶ್ರೀನಿವಾಸ ಸಂದ್ರ ಹೊರವಲಯದಲ್ಲಿ ಕಾಡಾನೆಗಳನ್ನು ಓಡಿಸಲು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ ನಡೆಸಿದ್ದಾರೆ. ಗುಂಪಿನಲ್ಲಿ 7 ಆನೆಗಳಿದ್ದು, ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿವೆ.

ಅತ್ತ ಆಂಧ್ರ ಪ್ರದೇಶದಿಂದಲೂ ಆನೆಗಳನ್ನು ಓಡಿಸಲು ಪಟಾಕಿ ಹಚ್ಚಲಾಗುತ್ತಿದೆ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕ್ಷೇತ್ರಕ್ಕೆ ಆನೆಗಳು ನುಗ್ಗಬಹುದೆಂಬ ಕಾರಣದಿಂದ, 300 ಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಓಡಿಸುತ್ತಿದ್ದಾರೆ.

ಇತ್ತ ಕರ್ನಾಟಕದಿಂದಲೂ ಆನೆ ಓಡಿಸಲು ಪಟಾಕಿ ಹಚ್ಚುತ್ತಿದ್ದು, ಎರಡೂ ಕಡೆ ಪಟಾಕಿ ಸದ್ದಿಗೆ ಆನೆಗಳು ಬೆದರಿವೆ. ರಾಮಕುಪ್ಪಂ, ಕೃಷ್ಣಗಿರಿ ಅರಣ್ಯದಿಂದ ಈ ಕಾಡಾನೆಗಳು ಬಂದಿರಬಹುದೆಂದು ಹೇಳಲಾಗಿದೆ.

ಅವುಗಳನ್ನು ಓಡಿಸಲು ಎರಡೂ ರಾಜ್ಯಗಳ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಪಟಾಕಿ ಸದ್ದಿಗೆ ಬೆದರಿದ ಆನೆಗಳು ಶ್ರೀನಿವಾಸ ಸಂದ್ರ ವ್ಯಾಪ್ತಿಯಲ್ಲೇ ಬೀಡುಬಿಟ್ಟಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...