alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಕ್ರಾಂತಿ ಸಂಭ್ರಮದಲ್ಲೇ ಕಾಡಾನೆಯ ಅಟ್ಟಹಾಸ….

ಹಾಸನ: ಹಾಸನ ಜಿಲ್ಲೆಯಲ್ಲಿ ಕಾಡಾನೆಯೊಂದು ಅಟ್ಟಹಾಸ ಮೆರೆದಿದ್ದು, ಮನೆಯ ಮುಂದೆ ನಿಂತಿದ್ದ ಬಾಲಕನನ್ನು ಎಳೆದೊಯ್ದು ಕೊಂದು ಹಾಕಿದೆ.

ಆಲೂರು ತಾಲ್ಲೂಕು ಕೊಡಗತ್ತವಳ್ಳಿಯಲ್ಲಿ ಈ ಘಟನೆ ನಡೆದಿದೆ. 14 ವರ್ಷದ ಭರತ್ ಮೃತಪಟ್ಟ ಬಾಲಕ. ಸಂಕ್ರಾಂತಿ ಹಬ್ಬಕ್ಕೆಂದು ಅಜ್ಜಿ ಊರಿಗೆ ಬಂದಿದ್ದ ಭರತ್, ಬೆಳಿಗ್ಗೆ ಮನೆಯ ಎದುರು ನಿಂತಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ಒಂಟಿ ಸಲಗ ಭರತ್ ನನ್ನು ಎಳೆದುಕೊಂಡು ಹೋಗಿದೆ.

ರಸ್ತೆಯಲ್ಲೇ ಆತನನ್ನು ಎಸೆದು ತುಳಿದು ಕೊಂದಿದೆ. ಇದರಿಂದಾಗಿ ಊರಿನಲ್ಲಿ ಆತಂಕದ ವಾತಾವರಣ ಉಂಟಾಗಿದೆ. ಪದೇ ಪದೇ ಈ ಭಾಗದಲ್ಲಿ ಕಾಡಾನೆಗಳು ದಾಳಿ ಮಾಡುತ್ತಿದ್ದು, ಅವುಗಳನ್ನು ದೂರಕ್ಕೆ ಓಡಿಸುವಂತೆ ಸುತ್ತಲಿನ ಜನ ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...