alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ದಾಖಲೆ ಬರೆದ ವಿಜಯಪುರ ಜಿಲ್ಲೆ

ವಿಜಯಪುರ: ನಗರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆ ಈ ಬಾರಿ ದಾಖಲೆಯೊಂದನ್ನು ಬರೆದಿದೆ. ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿ ಕೇವಲ 7 ನಿಮಿಷಗಳಲ್ಲೇ ಜಿಲ್ಲೆಯ ಸಂಪೂರ್ಣ ಫಲಿತಾಂಶ ಪ್ರಕಟಗೊಂಡಿದೆ.

ಹೌದು. ಪ್ರತಿ ಬಾರಿ ರಾಜ್ಯದಲ್ಲೇ ಕೊನೆಯ ಫಲಿತಾಂಶ ಪ್ರಕಟವಾಗುವ ಮೂಲಕ ಗಮನ ಸೆಳೆಯುತ್ತಿದ್ದ ವಿಜಯಪುರ ಜಿಲ್ಲೆ ನಿನ್ನೆ ಕೇವಲ 7 ನಿಮಿಷಗಳಲ್ಲೇ ಫಲಿತಾಂಶವನ್ನು ಪ್ರಕಟಿಸುವ ಮೂಲಕ ಚುನಾವಣಾಧಿಕಾರಿಗಳು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ಮತ ಎಣಿಕೆ ಆರಂಭವಾಗಿ 4 ನಿಮಿಷಗಳಲ್ಲಿ ಮುದ್ದೇಬಿಹಾಳ ಪುರಸಭೆಯ ಮೊದಲ ವಾರ್ಡಿನ ಫಲಿತಾಂಶ ಪ್ರಕಟ ಮಾಡಿದ ಚುನಾವಣಾಧಿಕಾರಿ ಎಂ.ಎನ್. ಚೋರಗಸ್ತಿ, ರಾಜ್ಯದಲ್ಲೇ ಮೊದಲ ಫಲಿತಾಂಶ ಪ್ರಕಟವಾದ ಪುರಸಭೆ ಎಂದು ಗಮನ ಸೆಳೆದರು.

ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಜನರು ಮತ ಎಣಿಕೆ ಕೇಂದ್ರಕ್ಕೆ ಸಂಭ್ರಮಾಚರಣೆಗೆ ಆಗಮಿಸುತ್ತಿರುವಷ್ಟರಲ್ಲೇ ಕೇವಲ 7 ನಿಮಿಷಗಳಲ್ಲಿ ಎಲ್ಲ 22 ವಾರ್ಡುಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಮೂಲಕ ವಿಜಯಪುರ ಈ ಬಾರಿ ರಾಜ್ಯದಲ್ಲಿ ಮೊದಲ ಫಲಿತಾಂಶ ಪ್ರಕಟಗೊಂಡ ಜಿಲ್ಲೆ ಎಂಬ ಖ್ಯಾತಿಗೆ ಭಾಜನವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...