alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಲು ಗೆಲುವಿನ ಲೆಕ್ಕಾಚಾರಕ್ಕೆ ನಾಳೆ ಮಧ್ಯಾಹ್ನದೊಳಗೆ ತೆರೆ

ದೇಶದ ಗಮನಸೆಳೆದ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಚುನಾವಣೆ ಆರಂಭದ ದಿನದಿಂದಲೂ ಪ್ರಚಾರ, ಮತಗಳಿಕೆ, ಸೋಲು –ಗೆಲುವು ಮೊದಲಾದ ವಿಚಾರಗಳ ಬಗ್ಗೆ ನಡೆದಿದ್ದ ಮಾತುಕತೆಗಳು ಮುಂದುವರೆದಿವೆ.

ಯಾವ ಬೂತ್ ನಲ್ಲಿ ಎಷ್ಟು ಮತ ಬರಬಹುದು. ಕಡಿಮೆ ಅಂತರದಲ್ಲಿ ಗೆಲ್ತಾರಾ? ಸೋಲ್ತಾರಾ? ಕಣದಲ್ಲಿರುವ ಬಂಡಾಯ, ಪಕ್ಷೇತರ ಅಭ್ಯರ್ಥಿಗಳಿಂದಾಗಿ ಮತ ವಿಭಜನೆಯಾಗುತ್ತಾ? ಇಂತಹುದೇ ಲೆಕ್ಕಾಚಾರಗಳು ನಡೆದಿವೆ. ಇನ್ನು ಯಾವ ಪಕ್ಷಕ್ಕೆ ಬಹುಮತ ಬರಲಿದೆ. ಮುಖ್ಯಮಂತ್ರಿ ಯಾರಾಗ್ತಾರೆ? ಅತಂತ್ರ ಫಲಿತಾಂಶ ಬಂದಲ್ಲಿ ಯಾವ ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿವೆ. ಮುಖ್ಯಮಂತ್ರಿ –ಉಪಮುಖ್ಯಮಂತ್ರಿ ಯಾರಾಗ್ತಾರೆ? ಹೀಗೆ ಲೆಕ್ಕಾಚಾರಗಳ ಮೇಲೆ ಲೆಕ್ಕಾಚಾರಗಳು, ಮಾತುಕತೆಗಳು ಮುಂದುವರೆದಿವೆ.

ನಾಳೆ ಮಧ್ಯಾಹ್ನದೊಳಗೆ ಎಲ್ಲಾ 212 ಕ್ಷೇತ್ರಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಯಾರಿಗೆ ಗೆಲುವು? ಯಾರಿಗೆ ಸೋಲು ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ಆದರೆ, ಅಲ್ಲಿವರೆಗೂ ಕಾಯುವ ತಾಳ್ಮೆ ಕಾರ್ಯಕರ್ತರು, ಅಭ್ಯರ್ಥಿಗಳು, ಬೆಂಬಲಿಗರಲ್ಲಿ ಇಲ್ಲದ ಕಾರಣ ಲೆಕ್ಕಾಚಾರಗಳು ಮುಂದುವರೆದಿವೆ. ನಾಳೆ ಮಧ್ಯಾಹ್ನದೊಳಗೆ ಸೋಲು, ಗೆಲುವಿನ ಲೆಕ್ಕಾಚಾರಕ್ಕೆ ತೆರೆ ಬೀಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...