alex Certify
ಕನ್ನಡ ದುನಿಯಾ       Mobile App
       

Kannada Duniya

ನಾಮಪತ್ರ ಪರಿಶೀಲನೆ, ಕಣದಲ್ಲಿರುವ ಅಭ್ಯರ್ಥಿಗಳೆಷ್ಟು ಗೊತ್ತಾ…?

ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಿನ್ನೆ ಕೊನೆಯ ದಿನವಾಗಿದ್ದು, ಇಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆದಿದೆ. ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 27 ಕಡೆಯ ದಿನವಾಗಿದೆ.

ನಾಮಪತ್ರ ಪರಿಶೀಲನೆ ಬಳಿಕ ಕಣದಲ್ಲಿ 3374 ಅಭ್ಯರ್ಥಿಗಳಿದ್ದಾರೆ. 3115 ಮಂದಿ ಪುರುಷರು, 259 ಮಹಿಳೆಯರು ಸ್ಪರ್ಧಿಸಿದ್ದಾರೆ.

1673 ಪಕ್ಷೇತರ ಅಭ್ಯರ್ಥಿಗಳು, ಬಿ.ಜೆ.ಪಿ.ಯ 282, ಕಾಂಗ್ರೆಸ್ ಪಕ್ಷದ 250 ಹಾಗೂ ಜೆ.ಡಿ.ಎಸ್. ಪಕ್ಷದ 239, ಬಿ.ಎಸ್.ಪಿ.ಯ 22, ಸಿ.ಪಿ.ಐ. ಪಕ್ಷದ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುಳಬಾಗಿಲು ಕ್ಷೇತ್ರದಲ್ಲಿ 60 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಈ ಮಾಹಿತಿ ನೀಡಿದ್ದು, ಶಾಸಕ ಅಶೋಕ್ ಖೇಣಿ, ಕೊತ್ತೂರು ಮಂಜುನಾಥ್, ಕೆ.ಜಿ.ಎಫ್. ನ ರೂಪಕಲಾ ಸೇರಿ ಹಲವರ ನಾಮಪತ್ರ ಪರಿಶೀಲನೆಯನ್ನು ನಾಳೆಗೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...