alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳೆಯನ ಗೆಲುವಿಗೆ ಹೀಗಿದೆ ಜನಾರ್ಧನ ರೆಡ್ಡಿ ರಣತಂತ್ರ

ಚಿತ್ರದುರ್ಗ: ಮೊಳಕಾಲ್ಮೂರು ಕ್ಷೇತ್ರಕ್ಕೆ ಸಂಸದ ಶ್ರೀರಾಮುಲು ಅವರಿಗೆ ಬಿ.ಜೆ.ಪಿ. ಟಿಕೆಟ್ ನೀಡಲಾಗಿದ್ದು, ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಬಿ.ಜೆ.ಪಿ. ಅಧಿಕಾರಕ್ಕೆ ಬಂದ್ರೆ ಶ್ರೀರಾಮುಲು ಅವರಿಗೆ ಡಿ.ಸಿ.ಎಂ. ಸ್ಥಾನ ನೀಡಲಾಗುತ್ತೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

ಬಳ್ಳಾರಿಯಿಂದ ಚಿತ್ರದುರ್ಗ ಜಿಲ್ಲೆಗೆ ಬಂದಿರುವ ಶ್ರೀರಾಮುಲು ಅವರ ಗೆಲುವಿಗೆ ಮಾಜಿ ಸಚಿವ ಜನಾರ್ಧನ ರೆಡ್ಡಿ ರಣತಂತ್ರ ರೂಪಿಸಿದ್ದಾರೆ. ಗೆಳೆಯನ ಗೆಲುವಿಗಾಗಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಮೊಳಕಾಲ್ಮೂರು ಕ್ಷೇತ್ರದ ಹಾನಗಲ್ ನುಂಕಿಮಲೆ ಬೆಟ್ಟದ ರಸ್ತೆಯಲ್ಲಿ ಡಾ. ವೆಂಕಟೇಶ್ ಅವರಿಗೆ ಸೇರಿದ 2 ಮಹಡಿಯ ಹವಾ ನಿಯಂತ್ರಿತ ಮನೆಯನ್ನು ಬಾಡಿಗೆ ಪಡೆಯಲಾಗಿದೆ. ಕೇವಲ 101 ರೂ.ಗೆ ಬಾಡಿಗೆ ಪಡೆಯಲಾಗಿದ್ದು, ಈ ಮನೆಗೆ 3 -4 ದಿನದಲ್ಲಿ ಜನಾರ್ಧನ ರೆಡ್ಡಿ ಶಿಫ್ಟ್ ಆಗಲಿದ್ದಾರೆ. ಚುನಾವಣೆಯಲ್ಲಿ ಗೆಳೆಯನ ಗೆಲುವಿಗೆ ಕಾರ್ಯತಂತ್ರ ರೂಪಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...