alex Certify
ಕನ್ನಡ ದುನಿಯಾ       Mobile App
       

Kannada Duniya

ಖರೀದಿಗೆ ಬಂದ ಮದ್ಯಪ್ರಿಯರಿಗೆ ಶಾಕ್

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಕಾರಣದಿಂದ ಮೇ 10 ರಂದು ಸಂಜೆ 5 ಗಂಟೆಯಿಂದ ಮೇ 12 ರಂದು ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಇಂದು ಸಂಜೆಯಿಂದಲೇ ಎಲ್ಲಾ ಮದ್ಯದ ಅಂಗಡಿಗಳು ಬಂದ್ ಆಗಿವೆ. ಮದ್ಯವನ್ನು ಖರೀದಿಸಲು ಅಂಗಡಿಗೆ ಹೋದ ಬಹುತೇಕ ಮದ್ಯಪ್ರಿಯರಿಗೆ ಬಾಗಿಲು ಬಂದ್ ಆಗಿರುವುದನ್ನು ಕಂಡು ಶಾಕ್ ಆಗಿದೆ. ಸಂಜೆಯಿಂದಲೇ ಮದ್ಯದ ಅಂಗಡಿಗಳು ಬಂದ್ ಆಗಿದ್ದು, ಮುಚ್ಚಿದ ಬಾಗಿಲು ಕಂಡು ಗ್ರಾಹಕರು ನಿರಾಸೆಯಿಂದ ಮನೆಯತ್ತ ಹೆಜ್ಜೆ ಹಾಕಿದ್ದಾರೆ.

ಮೇ 12 ರಂದು ಮತದಾನ ನಡೆಯಲಿದೆ. ಅದೇ ರೀತಿ ಮೇ 15 ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಇರುವುದರಿಂದ ಅಂದು ಕೂಡ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...