alex Certify
ಕನ್ನಡ ದುನಿಯಾ       Mobile App
       

Kannada Duniya

ಸಿ.ಎಂ. ಹಿತೈಷಿಯಾಗಿ ಇಂತಹ ಸಲಹೆ ನೀಡಿದ್ರು ಈಶ್ವರಪ್ಪ

ಬೆಂಗಳೂರು: ತಮ್ಮನ್ನು ಸೋಲಿಸಲು ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಒಂದಾಗಿವೆ ಎಂದು ಸಿ.ಎಂ. ಸಿದ್ಧರಾಮಯ್ಯ ಹೇಳುವ ಮೂಲಕ, ಚುನಾವಣೆಗೂ ಮೊದಲೇ ಸೋಲು ಒಪ್ಪಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿ.ಎಂ. ಸಿದ್ಧರಾಮಯ್ಯ, ವರುಣಾದಲ್ಲಿ ಅವರ ಪುತ್ರ ಯತೀಂದ್ರ ಸೋಲು ನಿಶ್ಚಿತವಾಗಿದೆ. ಹೀಗಾಗಿ ಅವರು ತಮ್ಮನ್ನು ಸೋಲಿಸ್ತಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದೇ ತಮ್ಮ ಕೊನೆ ಚುನಾವಣೆ ಎಂದು ಅವರು ಹೇಳಿದ್ದು, ಕೊನೆಯ ಚುನಾವಣೆಯಲ್ಲಿ ಸೋತೆನೆಂದು ಸಾಯುವವರೆಗೂ ಕೊರಗುವುದಕ್ಕಿಂತ ಚುನಾವಣೆಯಲ್ಲಿ ಸ್ಪರ್ಧಿಸದಿರುವುದೇ ಒಳಿತು ಎಂದು ಈಶ್ವರಪ್ಪ ಸಲಹೆ ನೀಡಿದ್ದಾರೆ.

ಸಿದ್ಧರಾಮಯ್ಯನವರ ಹಿತೈಷಿಯಾಗಿ ಅವರಿಗೆ ಸಲಹೆ ನೀಡುತ್ತಿದ್ದೇನೆ. ಕೊನೆ ಚುನಾವಣೆಯಲ್ಲಿ ಸೋತು ಕೊರಗುವುದಕ್ಕಿಂತ ಸ್ಪರ್ಧಿಸದಿರುವುದೇ ಒಳ್ಳೆಯದು. ಅವರು ನೆಮ್ಮದಿಯಿಂದ ಇರಬಹುದು. ಬೇರೆಯವರನ್ನು ಆ ಕ್ಷೇತ್ರಗಳಲ್ಲಿ ನಿಲ್ಲಿಸಿ ಸೋಲಿಸಲಿ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಬೇರೆಯವರನ್ನು ಸೋಲಿಸುವುದರಲ್ಲಿ ಸಿದ್ಧರಾಮಯ್ಯ ಅವರಿಗೆ ಸಲೀಸು. ಕಳೆದ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್ ಅವರನ್ನು ಸೋಲಿಸಿದ್ದರು. ಸೋಲಿಸುವುದರಲ್ಲಿ ಅವರು ಎಕ್ಸ್ ಪರ್ಟ್. ಪುತ್ರನ ಮೊದಲ ಮತ್ತು ಅವರ ಕೊನೆಯ ಚುನಾವಣೆಯಲ್ಲಿ ಅವರು ಸೋಲಬಾರದು. ಚುನಾವಣೆಗೆ ನಿಲ್ಲದಿರುವುದು ಒಳ್ಳೆಯದು. ಎರಡೂ ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...