alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯ ವಿಧಾನಸಭೆ ಚುನಾವಣೆಗೆ ಒಂದೇ ಹಂತದ ಮತದಾನ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಏಪ್ರಿಲ್ 15 ರ ವೇಳೆಗೆ ದಿನಾಂಕ ಘೋಷಣೆಯಾಗಲಿದ್ದು, ಮೇ ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ.

ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್, ಮಾರ್ಚ್ ಅಂತ್ಯಕ್ಕೆ ಹಾಗೂ ಏಪ್ರಿಲ್ 14 ರ ವೇಳೆಗೆ ವಿವಿಧ ಪರೀಕ್ಷೆಗಳು ಮುಕ್ತಾಯವಾಗಲಿವೆ. ಏಪ್ರಿಲ್ 15 ರ ವೇಳೆಗೆ ಚುನಾವಣೆ ದಿನಾಂಕವನ್ನು ಪ್ರಕಟಿಸಲಾಗುತ್ತದೆ ಎಂದು ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಈಗಾಗಲೇ ಚುನಾವಣೆಗೆ ಇ.ವಿ.ಎಂ.(ವಿದ್ಯುನ್ಮಾನ ಮತಯಂತ್ರಗಳು) ಬಂದಿವೆ. ಎಲ್ಲಾ ಜಿಲ್ಲೆಗಳಿಗೆ ಮತಯಂತ್ರಗಳನ್ನು ರವಾನಿಸಲಾಗುತ್ತಿದೆ. ಅವುಗಳನ್ನು ಪರೀಕ್ಷಿಸಿ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗುತ್ತಿದೆ. ಮೇ 10 ರ ಬಳಿಕ ಮತದಾನ ದಿನಾಂಕ ನಿಗದಿಯಾಗಲಿದ್ದು, ಒಂದೇ ಹಂತದಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ. 2 ಹಂತದಲ್ಲಿ ಮತದಾನ ನಡೆಸಿದಲ್ಲಿ ಮೇ 28 ರೊಳಗೆ ಹೊಸ ವಿಧಾನಸಭೆ ರಚನೆಗೆ ವಿಳಂಬವಾಗಲಿರುವುದರಿಂದ ಒಂದೇ ಹಂತದಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ.

ಸಮಯ ಉಳಿತಾಯ, ವೆಚ್ಚ ಕಡಿಮೆ ಮಾಡುವ ಉದ್ದೇಶ ಹಾಗೂ ಅಕ್ರಮ ತಡೆಗೆ ರಾಜಕೀಯ ಪಕ್ಷಗಳು ನೀಡಿದ ಸಲಹೆಯಂತೆ ಒಂದೇ ಹಂತದಲ್ಲಿ ಮತದಾನ ನಡೆಸಲು ಆಯೋಗ ಚಿಂತಿಸಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ರಾಜ್ಯಕ್ಕೆ ಭೇಟಿ ನೀಡಿ ಚುನಾವಣೆ ಸಿದ್ಧತೆ, ಕಾನೂನು ಸುವ್ಯವಸ್ಥೆ ಮೊದಲಾದ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿ ದಿನಾಂಕ ಘೋಷಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...