alex Certify
ಕನ್ನಡ ದುನಿಯಾ       Mobile App
       

Kannada Duniya

ಮತದಾರರ ಮನಸೆಳೆದ ಫ್ಲಾಶ್ ಮಾಬ್ ಡ್ಯಾನ್ಸ್

ಶಿವಮೊಗ್ಗ: ಜಿಲ್ಲಾಡಳಿತದ ವತಿಯಿಂದ ಮತದಾರರ ಜಾಗೃತಿಗಾಗಿ ಶುಕ್ರವಾರ ಶಿವಮೊಗ್ಗ ನಗರದ ವಿವಿಧೆಡೆ ಆಯೋಜಿಸಲಾದ ಫ್ಲಾಶ್ ಮಾಬ್ ಡ್ಯಾನ್ಸ್ ಎಲ್ಲರನ್ನೂ ಆಕರ್ಷಿಸಿದೆ.

ನಗರದ ಡ್ರ್ಯಾಗನ್ ನೃತ್ಯ ತಂಡದ ಸುಮಾರು 20 ನೃತ್ಯಪಟುಗಳು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮತದಾನ ಜಾಗೃತಿ ಹಾಡಿಗೆ ಆಕರ್ಷಕವಾಗಿ ಹೆಜ್ಜೆ ಹಾಕಿ ಮತದಾನಕ್ಕೆ ಆಹ್ವಾನ ನೀಡಿದರು. ಜಿಲ್ಲಾಧಿಕಾರಿ ಎಂ.ಲೋಕೇಶ್, ಫ್ಲಾಶ್ ಮಾಬ್ ಡ್ಯಾನ್ಸ್ ಕಾರ್ಯಕ್ರಮಕ್ಕೆ ಖಾಸಗಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು.

ಕಲಾವಿದರು ಶಿವಪ್ಪ ನಾಯಕ ವೃತ್ತ, ಲಕ್ಷ್ಮಿ ಟಾಕೀಸ್ ಬಳಿ, ಗೋಪಿ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ನೃತ್ಯವನ್ನು ಪ್ರದರ್ಶಿಸಿ ಗಮನ ಸೆಳೆದರು.

ಇದೇ ಮೊದಲ ಬಾರಿಗೆ ಮತದಾರರ ಜಾಗೃತಿಗಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾರ್ವಜನಿಕ ಸ್ಥಳದಲ್ಲಿ ದಿಢೀರನೆ ನೃತ್ಯ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಸಾರ್ವಜನಿಕರನ್ನು ಅದರಲ್ಲೂ ಯುವ ಜನರನ್ನು ಮತದಾನದತ್ತ ಸೆಳೆಯಲು, ಈ ಕುರಿತು ಜಾಗೃತಿ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಫ್ಲಾಶ್ ಮಾಬ್ ಡ್ಯಾನ್ಸ್ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮತದಾನ ಪ್ರಮಾಣ ಕಡಿಮೆ ದಾಖಲಾಗುತ್ತಿದೆ. ಮೇ 12ರಂದು ರಜಾದಿನವೆಂದು ಯಾರೂ ಮತದಾನ ಮಾಡದೆ ತಿರುಗಾಟಕ್ಕೆ ಹೋಗಬಾರದು. ಪ್ರಜಾಪ್ರಭುತ್ವವನ್ನು ಬಲಪಡಿಸಲು ಎಲ್ಲರ ಸಹಭಾಗಿತ್ವ ಅಗತ್ಯ. ಪ್ರತಿಯೊಂದು ಮತವೂ ಅಮೂಲ್ಯವಾದುದ್ದು. ಮತದಾನದಿಂದ ಹೊರಗುಳಿದು ನಂತರದ ವರ್ಷಗಳಲ್ಲಿ ಆಡಳಿತವನ್ನು ಟೀಕಿಸುತ್ತಿದ್ದರೆ ಯಾವುದೇ ಪ್ರಯೋಜನವಿಲ್ಲ. ಮತದಾನದಲ್ಲಿ ಭಾಗವಹಿಸಿದರೆ ಮಾತ್ರ ಈ ರೀತಿ ಆಡಳಿತವನ್ನು ಪ್ರಶ್ನಿಸುವ ನೈತಿಕತೆ ಬರುತ್ತದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ದಾಖಲಾಗಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ರಾಕೇಶ್ ಕುಮಾರ್, ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಹುಲ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಚಾಡೊ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...