alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯಾಯಸಮ್ಮತ ಚುನಾವಣೆಗೆ ಆಯೋಗದಿಂದ ಸಕಲ ಸಿದ್ದತೆ

ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಹಿರಂಗ ಪ್ರಚಾರಕ್ಕೆ ಈಗ ತೆರೆ ಬಿದ್ದಿದ್ದು, ಮತದಾರರ ಒಲವು ಗಳಿಸಲು ಅಭ್ಯರ್ಥಿಗಳು ಅಂತಿಮ ಕ್ಷಣದ ತೆರೆಮರೆಯ ‘ಕಸರತ್ತು’ ನಡೆಸುತ್ತಿದ್ದಾರೆ.

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಕೇಂದ್ರ ಚುನಾವಣಾ ಆಯೋಗ ಸಕಲ ಸಿದ್ದತೆಯನ್ನು ಕೈಗೊಂಡಿದ್ದು, ಅಭ್ಯರ್ಥಿಗಳ ರಾತ್ರಿ ಕರಾಮತ್ತಿಗೆ ಕಡಿವಾಣ ಹಾಕಲು ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.

ಮುಕ್ತ ನ್ಯಾಯಸಮ್ಮತ ಚುನಾವಣೆಗೆ ಆಯೋಗ ಸಕಲ ಸಿದ್ದತೆ ಕೈಗೊಂಡಿದೆ. ಮತಗಟ್ಟೆಗಳಿಗೆ ಮತದಾರರು, ಮತಗಟ್ಟೆ ಸಿಬ್ಬಂದಿ, ನಿಯೋಜಿತ ಅಧಿಕಾರಿ, ಅಭ್ಯರ್ಥಿ, ನಿಯೋಜಿತ ಏಜೆಂಟ್, ಅಂಧ ಹಾಗೂ ದುರ್ಬಲರಿಗೆ ಸಹಾಯಕರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶವಿಲ್ಲ.

ಮತಗಟ್ಟೆಯ 200 ಮೀಟರ್ ಅಂತರದಲ್ಲಿ ಅಭ್ಯರ್ಥಿಗೆ ಬೂತ್ ನಿರ್ಮಿಸಲು ಅವಕಾಶವಿದೆ. ಒಂದು ಟೇಬಲ್, ಎರಡು ಕುರ್ಚಿ ಹಾಗೂ ನಿಗದಿತ ಅಳತೆಯ ಬ್ಯಾನರ್ ಬಳಸಬಹುದು. 200 ಮೀಟರ್ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ ಹಾಗೂ ಗುಂಪು ಸೇರುವಂತಿಲ್ಲ. ಇದರೊಂದಿಗೆ ಪೊಲೀಸರು, ಅರೆಸೇನಾಪಡೆ ಸಿಬ್ಬಂದಿ ಸೇರಿದಂತೆ ಭದ್ರತಾ ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ. ಸೂಕ್ಷ್ಮ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...