alex Certify
ಕನ್ನಡ ದುನಿಯಾ       Mobile App
       

Kannada Duniya

ಇಯರ್ ಫೋನ್ ತಂತು ಪ್ರಾಣಕ್ಕೆ ಕುತ್ತು: ಹಳಿ ದಾಟುತ್ತಿದ್ದ ವ್ಯಕ್ತಿ ಮೇಲೆ ಹರಿದ ರೈಲು

ಇಯರ್ ಫೋನ್ ಹಾಕಿಕೊಂಡು ಮೊಬೈನ್ ನಲ್ಲಿ ಮಾತನಾಡುತ್ತ ಹಳಿ ದಾಟುತ್ತಿದ್ದ ವ್ಯಕ್ತಿ ಮೇಲೆ ರೈಲು ಹರಿದು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದ ಅಮದಳ್ಳಿಯಲ್ಲಿ ನಡೆದಿದೆ.

ಬಾವಿಕೇರಿ ನಿವಾಸಿ ಗಣೇಶ್ ನಾಯ್ಕ (24) ಮೃತ ಯುವಕ. ಗಣೇಶ್ ಕಿವಿಗೆ ಇಯರ್ ಫೋನ್ ಹಾಕಿಕೊಂಡು ರೈಲ್ವೆ ಹಳಿಯ ಮೇಲೆ ಮಾತನಾಡುತ್ತಾ ಹೋಗುತ್ತಿದ್ದ. ಇದರಿಂದ ರೈಲು ಬರುವ ಶಬ್ದ ಆತನಿಗೆ ಕೇಳಿಸಿಯೇ ಇಲ್ಲ. ಪರಿಣಾಮ ವೇಗವಾಗಿ ಬಂದ ಮಡಂಗಾವ್–ಮಂಗಳೂರು ಇಂಟರ್ ಸಿಟಿ ರೈಲು ಡಿಕ್ಕಿಹೊಡೆದಿದೆ. ಗಣೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...