alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಡ್ನಾಪ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಡಿವೈಎಸ್ಪಿ ಆತ್ಮಹತ್ಯೆ ಯತ್ನ..?

Crim klತೇಜಸ್ ಗೌಡ ಎಂಬ ಯುವಕನನ್ನು ಅಪಹರಿಸಿ ಆತನಿಂದ 10 ಲಕ್ಷ ರೂ. ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಚಿಕ್ಕಮಗಳೂರು ವಿಭಾಗದ ಡಿ.ವೈ.ಎಸ್.ಪಿ. ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ನಡೆದಿದೆ.

ಸೋಮವಾರ ತಮ್ಮ ವಿರುದ್ದ ದೂರು ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಕಲ್ಲಪ್ಪ ಹಂಡಿಭಾಗ್, ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರುಗೋಡು ಠಾಣಾ ವ್ಯಾಪ್ತಿಯಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡಿದ್ದರೆನ್ನಲಾಗುತ್ತಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

ಡಿ.ವೈ.ಎಸ್.ಪಿ. ಕಲ್ಲಪ್ಪ ಹಂಡಿಭಾಗ್ ಅವರು ತಮ್ಮನ್ನು ರೌಡಿಗಳ ಮೂಲಕ ಅಪಹರಿಸಿ, 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದು, ಬಳಿಕ ಚೌಕಾಸಿ ನಡೆದು, 10 ಲಕ್ಷ ರೂ. ಪಡೆದುಕೊಂಡು ತಮ್ಮನ್ನು ಬಿಡುಗಡೆ ಮಾಡಿದ್ದಾರೆ ಎಂದು ತೇಜಸ್ ಗೌಡ ಎಂಬ ಯುವಕ ಚಿಕ್ಕಮಗಳೂರಿನ ಬಸವನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಎಸ್.ಪಿ. ಸಂತೋಷ್ ಬಾಬು ಅವರು ತನಿಖೆಗೆ ಆದೇಶಿಸಿದ್ದು, ಬಳಿಕ ಕಲ್ಲಪ್ಪ ತಲೆಮರೆಸಿಕೊಂಡಿದ್ದರು ಎನ್ನಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...