alex Certify
ಕನ್ನಡ ದುನಿಯಾ       Mobile App
       

Kannada Duniya

ಡಿ.ವೈ.ಎಸ್.ಪಿ. ಗಣಪತಿ ಪತ್ನಿಗೆ ಸಿ.ಐ.ಡಿ. ನೋಟೀಸ್

ganapathy-madikeri-dysp 13

ಮಡಿಕೇರಿ: ಕಳೆದ ವಾರದಿಂದ ತೀವ್ರ ಚರ್ಚೆಯಲ್ಲಿರುವ ಮಂಗಳೂರು ಡಿ.ವೈ.ಎಸ್.ಪಿ. ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಸದನದಲ್ಲಿಯೂ ಕೋಲಾಹಲಕ್ಕೆ ಕಾರಣವಾಗಿದೆ.

ಗಣಪತಿ ಅವರ ಕುಟುಂಬದವರು ಸರ್ಕಾರದ ನಡೆಗೆ ಬೇಸರ ವ್ಯಕ್ತಪಡಿಸಿ, ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದಾರೆ. ನ್ಯಾಯಾಲಯಕ್ಕೆ ಗಣಪತಿ ಅವರ ಸಹೋದರ ಕೂಡ ದೂರು ನೀಡಿದ್ದಾರೆ. ಸಿ.ಐ.ಡಿ. ತನಿಖೆ ನಡೆಯುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ಗಣಪತಿ ಪತ್ನಿ ಎಂ.ಜಿ.ಪಾವನಾ ಹಾಗೂ ಪುತ್ರನಿಗೆ ನೋಟೀಸ್ ನೀಡಲಾಗಿದೆ. ಗಣಪತಿ ಅವರ ಅಂತ್ಯ ಸಂಸ್ಕಾರ ಮುಗಿದ ನಂತರ, ತನಿಖೆಗೆ ಸಹಕಾರ ನೀಡುವುದಾಗಿ ಕುಟುಂಬದವರು ತಿಳಿಸಿದ್ದರೆನ್ನಲಾಗಿದೆ.

ಈ ಹಿನ್ನಲೆಯಲ್ಲಿ ಪಾವನಾ ಅವರಿಗೆ ಸಿ.ಐ.ಡಿ. ನೋಟೀಸ್ ಜಾರಿ ಮಾಡಿದ್ದು, ನೀವೇ ದಿನಾಂಕ ನಿಗದಿಪಡಿಸಿ ಹಾಗೂ ಇಚ್ಛಿಸಿದ ಸ್ಥಳದಲ್ಲಿ ವಿಚಾರಣೆಗೆ ಹಾಜರಾಗಿ ಸಹಕಾರ ನೀಡಿ ಎಂದು ನೋಟೀಸ್ ನೀಡಲಾಗಿದೆ. ಅಲ್ಲದೇ, ಮಂಗಳೂರು ವಾಸದ ಮನೆ ಪರಿಶೀಲನೆಗೂ ಸಹಕಾರ ಕೊಡಿ ಎಂದು ನೋಟೀಸ್ ನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...