alex Certify
ಕನ್ನಡ ದುನಿಯಾ       Mobile App
       

Kannada Duniya

ಡಿ.ವೈ.ಎಸ್.ಪಿ. ಗಣಪತಿ ಪ್ರಕರಣ, ಕೇಸ್ 1, ತನಿಖೆ 3

ganapathy madikeri dysp july 21

ಮಡಿಕೇರಿ: ಮಂಗಳೂರು ಐ.ಜಿ. ಕಚೇರಿಯಲ್ಲಿ ಡಿ.ವೈ.ಎಸ್.ಪಿ.ಯಾಗಿದ್ದ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಈಗಾಗಲೇ ತನಿಖೆ ನಡೆಯುತ್ತಿದೆ. ಆದರೆ, ಒಂದೇ ಪ್ರಕರಣದಲ್ಲಿ 3 ತನಿಖೆ ನಡೆಯುವ ಬಗ್ಗೆ ಗೊಂದಲವಾಗಿದೆ ಎನ್ನಲಾಗಿದೆ.

ಗಣಪತಿ ಆತ್ಮಹತ್ಯೆ ಮಾಡಿಕೊಂಡ ನಂತರ, ಸಿ.ಐ.ಡಿ. ಅಧಿಕಾರಿಗಳು ಮಡಿಕೇರಿಗೆ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದರು. 2 ವಾರಗಳಿಂದ ವಿವಿಧ ಕಡೆಗಳಲ್ಲಿ ತನಿಖೆ ನಡೆಸಿ, ಮಾಹಿತಿ ಕಲೆ ಹಾಕಿರುವ ಸಿ.ಐ.ಡಿ.ಪೊಲೀಸರು, ಈಗ ತನಿಖೆ ನಿಲ್ಲಿಸಿದ್ದಾರೆ ಎನ್ನಲಾಗಿದೆ. ಮಡಿಕೇರಿ ಜೆ.ಎಂ.ಎಫ್.ಸಿ. ನ್ಯಾಯಾಲಯ ಎಫ್.ಐ.ಆರ್.ದಾಖಲಿಸಲು ಸೂಚನೆ ನೀಡಿದ್ದರಿಂದ ನಗರ ಠಾಣೆ ಪೊಲೀಸರು ಕ್ರೈಂ ನಂ. 86/2016 ದಾಖಲಿಸಿಕೊಂಡಿದ್ದು, ಆಗಸ್ಟ್ 5 ರೊಳಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ ಎಂದು ಹೇಳಲಾಗಿದೆ.

ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದ್ದರಿಂದ ಸಿ.ಐ.ಡಿ. ತನಿಖೆ ನಿಲ್ಲಿಸಲಾಗಿದೆ. ಇದರ ನಡುವೆ ಪ್ರತಿಪಕ್ಷಗಳು ಮತ್ತು ಸಾರ್ವಜನಿಕರ ಒತ್ತಡದ ನಂತರ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸಿದೆ. ಒಂದು ಪ್ರಕರಣದ ತನಿಖೆಯನ್ನು ನ್ಯಾಯಾಂಗ, ಸಿ.ಐ.ಡಿ. ಹಾಗೂ ಪೊಲೀಸ್ ಇಲಾಖೆ ನಡೆಸುವಂತಾಗಿದೆ.

ಸಿ.ಐ.ಡಿ. ಮಾಹಿತಿ ಸಂಗ್ರಹಿಸಿ ತನಿಖೆ ನಿಲ್ಲಿಸಿದೆ. ಪೊಲೀಸರು ಈಗ ಕೇಸ್ ದಾಖಲಿಸಿಕೊಂಡು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನ್ಯಾಯಾಂಗ ತನಿಖೆ ಇನ್ನೂ ಆರಂಭವಾಗಿಲ್ಲ. ಇದೆಲ್ಲಾ ಗೊಂದಲಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...