alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣಗಳಲ್ಲೂ ಮನಸೆಳೆಯುತ್ತಿದೆ ದಸರಾ ವೈಭವ

ದಸರಾ ಎಂದಾಕ್ಷಣ ಎಲ್ಲರಿಗೂ ನೆನಪಾಗೋದು ಮೈಸೂರು. ನಾಡಹಬ್ಬವನ್ನು ಮೈಸೂರಲ್ಲಿ 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ನವರಾತ್ರಿಯಂದು ಆರಂಭವಾಗುವ ದಸರಾ ಉತ್ಸವಕ್ಕೆ ವಿಜಯದಶಮಿಯಂದು ತೆರೆ ಬೀಳುತ್ತದೆ.

ದಸರಾದ ಪ್ರಮುಖ ಆಕರ್ಷಣೆ ಅಂದ್ರೆ ಮೈಸೂರು ಅರಮನೆ. ನಾಡಹಬ್ಬದಲ್ಲಿ ಅರಮನೆಗೆ ವಿಶೇಷ ವಿದ್ಯುದ್ದೀಪಾಲಂಕಾರ ಮಾಡಲಾಗುತ್ತದೆ. ಸಂಜೆಯಾಗುತ್ತಿದ್ದಂತೆ ಅರಮನೆ ಕಂಗೊಳಿಸುತ್ತದೆ. ಪ್ಯಾಲೇಸ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು.

ದಸರಾ ಪ್ರಯುಕ್ತ ಆಯೋಜಿಸುವ ವಿಭಿನ್ನ ಕಾರ್ಯಕ್ರಮಗಳು ಕೂಡ ಮನಸೆಳೆಯುತ್ತವೆ. ಮೈಸೂರು ದಸರಾ ನೋಡಲು ವಿಶ್ವದ ಮೂಲೆ ಮೂಲೆಯಿಂದ ಪ್ರವಾಸಿಗರು ಬರುವುದು ವಿಶೇಷ. ಈ ಬಾರಿ ಕೂಡ ಚಾಮುಂಡೇಶ್ವರಿಯ ಆಶೀರ್ವಾದ ಪಡೆಯಲು ಭಕ್ತಸಾಗರವೇ ಹರಿದು ಬಂದಿವೆ.

ಟ್ವಿಟ್ಟರ್ ನಲ್ಲಂತೂ ಮೈಸೂರು ದಸರಾದ ಅಧ್ಭುತ ಫೋಟೋಗಳನ್ನು ಫೋಸ್ಟ್ ಮಾಡಲಾಗಿದೆ. ದಸರಾ ನೋಡಲು ಬಂದವರೆಲ್ಲ ಅರಮನೆ ಹಾಗೂ ಮೈಸೂರಿನ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...