alex Certify ಉದಯೋನ್ಮುಖ ನಟ ಆತ್ಮಹತ್ಯೆ, ಕಂಬನಿ ಮಿಡಿದ ‘ದುನಿಯಾ’ ವಿಜಯ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದಯೋನ್ಮುಖ ನಟ ಆತ್ಮಹತ್ಯೆ, ಕಂಬನಿ ಮಿಡಿದ ‘ದುನಿಯಾ’ ವಿಜಯ್

ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತವಾಗಿದೆ. ಉದಯೋನ್ಮುಖ ನಟ ಸುಶಿಲ್ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫಿಟ್ನೆಸ್ ಟ್ರೈನರ್, ರೂಪದರ್ಶಿ ಮತ್ತು ನಟರಾಗಿದ್ದ ಸುಶೀಲ್ ಗೌಡ ‘ಕಮರೊಟ್ಟು ಚೆಕ್ ಪೋಸ್ಟ್’ ಬಿಡುಗಡೆಯಾಗಬೇಕಿರುವ ದುನಿಯಾ ವಿಜಯ್ ನಟನೆಯ ‘ಸಲಗ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.

‘ಸಲಗ’ ಚಿತ್ರದ ನಟ ಮತ್ತು ನಿರ್ದೇಶಕ ‘ದುನಿಯಾ’ ವಿಜಯ್ ಅವರು ನಟ ಸುಶೀಲ್ ಗೌಡ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಮಂಡ್ಯ ಜಿಲ್ಲೆಯ ಸುಶೀಲ್ ‘ಸಲಗ’ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮುಂದೆ ಹೀರೋ ಆಗಬಹುದಾದ ಹುಡುಗ ಎಂದು ಭಾವಿಸಿದ್ದೆ. ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

'ಸಲಗ' ಚಿತ್ರದಲ್ಲಿ ಒಂದು ಒಳ್ಳೆಯ ಪೊಲೀಸ್ ಪಾತ್ರವಿದೆ. ಅದನ್ನು ಒಬ್ಬ ಸ್ಫುರದ್ರೂಪಿ ಹುಡುಗ ನಿರ್ವಹಿಸಿದ್ದ. ಆತನ ಹೆಸರು ಸುಶೀಲ್ ಅಂತ….

Posted by Duniya Vijay on Wednesday, July 8, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...