alex Certify
ಕನ್ನಡ ದುನಿಯಾ       Mobile App
       

Kannada Duniya

ದುನಿಯಾ ವಿಜಯ್ ಪತ್ನಿ ನಾಗರತ್ನ ಬಿಚ್ಚಿಟ್ಟಿದ್ದಾರೆ ಶಾಕಿಂಗ್ ಸಂಗತಿ

ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾಗಿದ್ದ ನಟ ದುನಿಯಾ ವಿಜಯ್ ಈಗ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

ದುನಿಯಾ ವಿಜಯ್ ಜೈಲಿಗೆ ಹೋದ ಸಂದರ್ಭದಲ್ಲೇ ಅವರ ಮೊದಲ ಪತ್ನಿ ನಾಗರತ್ನ ಹಾಗೂ ದ್ವಿತೀಯ ಪತ್ನಿ ಕೀರ್ತಿ ಗೌಡರ ನಡುವೆ ಜಟಾಪಟಿ ನಡೆದಿದ್ದು, ಈ ವಿಚಾರವೂ ಸಹ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.

ಆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದುನಿಯಾ ವಿಜಯ್ ಅವರ ಪತ್ನಿ ನಾಗರತ್ನ, ತಮ್ಮ ಪತಿ ಐದು ವಿವಾಹಗಳನ್ನು ಆಗಿದ್ದಾರೆಂಬ ಆಘಾತಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದರು.

ಜಾಮೀನಿನ ಮೇಲೆ ಹೊರಬಂದ ದುನಿಯಾ ವಿಜಯ್ ತಮ್ಮ ದ್ವಿತೀಯ ಪತ್ನಿ ಕೀರ್ತಿ ಗೌಡರೊಂದಿಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವೇಳೆ, ತಾವು ನಾಗರತ್ನ ಅವರಿಗೆ ಬರೆದು ಕೊಟ್ಟ ಆಸ್ತಿ ಮತ್ತಿತರ ವಿವರಗಳನ್ನು ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ದುನಿಯಾ ವಿಜಯ್ ಅವರ ಪತ್ನಿ ನಾಗರತ್ನ ಮತ್ತೊಂದು ಸ್ಪೋಟಕ ಸಂಗತಿಯನ್ನು ಬಯಲು ಮಾಡಿದ್ದಾರೆ.

ನಾನು ನನ್ನ ಪತಿಯೊಂದಿಗೆ ಸಂಸಾರ ಮಾಡಲೆಂದು ಬಂದಿದ್ದೇನೆ ಹೊರತು ಅವರ ಆಸ್ತಿ ನೋಡಿ ಅಲ್ಲ ಎಂದು ನಾಗರತ್ನ, ಕೀರ್ತಿ ಗೌಡರಿಗೆ ತಿರುಗೇಟು ನೀಡಿದ್ದಾರಲ್ಲದೇ ಇನ್ನೆರಡು ದಿನಗಳಲ್ಲಿ ಅವರ ಸಂಬಂಧದ ಕುರಿತು ಪ್ರಮುಖ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಕೀರ್ತಿ ಗೌಡರಿಗೆ ದುನಿಯಾ ವಿಜಯ್ ಮಾತ್ರವಲ್ಲ ಇನ್ನೂ ಹಲವರು ಬಾಯ್ ಫ್ರೆಂಡ್ ಗಳಿದ್ದು, ಸದ್ಯಕ್ಕೆ ನನ್ನ ಪತಿ ಬಳಿ ಬಂದಿರುವ ಆಕೆ, ನನ್ನ ಮಕ್ಕಳಿಂದ ಅಪ್ಪನ ಪ್ರೀತಿಯನ್ನು ಕಿತ್ತುಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...