alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಕಷ್ಟಕ್ಕೆ ಸಿಲುಕಿದ ದುನಿಯಾ ವಿಜಯ್

dunia-vijay‘ಮಾಸ್ತಿಗುಡಿ’ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಖಳ ನಟರಾದ ಉದಯ್ ಹಾಗೂ ಅನಿಲ್ ಮೃತಪಟ್ಟಿದ್ದು, ಅವರೊಂದಿಗೆ ನೀರಿಗೆ ಹಾರಿದ್ದ ನಾಯಕ ನಟ ದುನಿಯಾ ವಿಜಯ್ ಅವರನ್ನು ರಕ್ಷಿಸಲಾಗಿತ್ತು.

ಘಟನೆಗೆ ಸಂಬಂಧಪಟ್ಟಂತೆ ಚಿತ್ರದ ನಿರ್ಮಾಪಕ ಸುಂದರ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ನಟ ದುನಿಯಾ ವಿಜಯ್ ಅವರ ಮೇಲೂ ಕ್ರಮ ಕೈಗೊಳ್ಳಬೇಕಿತ್ತೆಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ, ವಿಜಯ್ ಇಂದು ಬೇರೊಂದು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

‘ಮಾಸ್ತಿಗುಡಿ’ ನಿರ್ಮಾಪಕ ಸುಂದರ್ ಅವರ ಸಹೋದರ ಶಂಕರ್ ಪತ್ನಿಯ ತಂದೆ ಜಯರಾಮ್ ಎಂಬವರ ಮೇಲೆ ದುನಿಯಾ ವಿಜಯ್ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಜಯರಾಮ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಮೂರು ತಿಂಗಳ  ಹಿಂದೆ ಶಂಕರ್ ಅವರ ವಿವಾಹ ಜಯರಾಮ್ ರ ಪುತ್ರಿ ಮಾನಸರ ಜೊತೆ ನೆರವೇರಿತ್ತೆನ್ನಲಾಗಿದ್ದು, ಮಗಳನ್ನು ಭೇಟಿ ಮಾಡಲು ಜಯರಾಮ್ ಹೋದ ವೇಳೆ ಅಲ್ಲಿಯೇ ಇದ್ದ ದುನಿಯಾ ವಿಜಯ್ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...